ಸುಳ್ಯ: ನಿನ್ನೆ ರಾತ್ರಿ ಸುಳ್ಯ ತಾಲೂಕಿನ ಹಲವೆಡೆ ಮತ್ತೆ ಭೂಮಿ ಕಂಪಿಸಿದೆ.
ಭೀಕರ ಶಬ್ದ ಮತ್ತು ಕಂಪನದಿಂದ ಮಲಗಿದ್ದ ಜನತೆ ಎಚ್ಚರಗೊಂಡಿದ್ದಾರೆ. ಮಧ್ಯ ರಾತ್ರಿ 1.15ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಶಾಂತಿನಗರ, ಹಳೆಗೇಟು ಭಾಗದಲ್ಲಿ ಭೂಮಿ ಕಂಪಿಸಿದೆ.
ವಾರದಲ್ಲಿ ನಾಲ್ಕನೇ ಬಾರಿ ಭೂಮಿ ಕಂಪಿಸಿದ್ದು ಜನರ ಆತಂಕ ಹೆಚ್ಚಿದೆ.