ಕೋಝಿಕ್ಕೋಡ್: ಹಿಂದಿ ತಿಳಿಯದ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷದ ನಾಯಕರಿಗೆ ಭಾಷಾಂತರವೇ ದೊಡ್ಡ ಸಮಸ್ಯೆ. ಹಲವು ಸಲ ಭಾಷಾಂತರಗಾರರು ಅಸಂಬದ್ಧ ಭಾಷಾಂಕರ ಮಾಡುತ್ತಾರೆ. ಇಂತಹ ಅವಾಂತರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿ ಹಾಸ್ಯದ ಮೂಲಕ ಹೇಳಿದ್ದಾರೆ. ತೆಲಂಗಾಣದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿರುವ ಅವರು, ನನ್ನ ಅನುವಾದಕರಾಗಿರುವುದು ಅತ್ಯಂತ ಅಪಾಯದ ಕೆಲಸ ಎಂದಿದ್ದಾರೆ.
ಕೇರಳದ ಕೋಝಿಕ್ಕೊಡ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ತೆಲಂಗಾಣ ಚುನಾವಣೆ ಪ್ರಚಾರದ ವೇಳೆ ನಾನು ಏನೋ ಹೇಳಿದರೆ ಆ ತೆಲುಗು ಭಾಷಾಂತರಗಾರರು ಇನ್ನೇನೋ ಹೇಳುತ್ತಿದ್ದರು. ಈ ಬಗ್ಗೆ ಅನುಮಾನ ಬಂದ ನಾನು ಪದಗಳನ್ನು ಲೆಕ್ಕ ಇಡಲು ಶುರು ಮಾಡಿದೆ. ಹಿಂದಿಯಲ್ಲಿ ಐದು ಪದಗಳಲ್ಲಿ ಹೇಳಿದ ಒಂದು ವಾಕ್ಯವನ್ನು ಇಪ್ಪತ್ತರಿಂದ ಮೂವತ್ತು ಪದಗಳಲ್ಲಿ ಅವರುಹೇಳುತ್ತಿದ್ದರು ಎಂದು ನಕ್ಕರು.
ಕೆಲವೊಮ್ಮೆ ತುಂಬಾ ನೀರಸವಾಗಿರುವುದನ್ನೆನಾದರೂ ಹೇಳಿದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ರೋಮಾಂಚನಕಾರಿಯಾಗಿರುವುದನ್ನು ಹೇಳಿದರೆ ನೀರಸ ಪ್ರತಿಕ್ರಿಯೆ ನೀಡುತ್ತಾರೆ. ಇದು ನನಗೆ ಕೋಪ ತರಿಸುವ ಬದಲು ನಗು ತರಿಸುತ್ತದೆ ಎಂದರು.
ಪುಸ್ತಕ ಬಿಡುಗಡೆಯ ಈ ಸಂದರ್ಭದ ರಾಹುಲ್ ಗಾಂಧಿಯವರ ಮಾತನ್ನು ಸಂಸದ ಅಬ್ದುಸ್ಸಮದ್ ಸಮದಾನಿ ಭಾಷಾಂತರ ಮಾಡಿದ್ದಾರೆ.