ಬೆಳಗ್ಗಿನವರೆಗೂ ಟ್ರಾನ್ಸ್​ಫರ್ ಕೌನ್ಸಿಲಿಂಗ್ : ಸುಸ್ತಾಗಿ ವರಾಂಡದಲ್ಲೇ ಮಲಗಿದ ಪೊಲೀಸರು

Prasthutha|

ಬೆಂಗಳೂರು: ನಗರದಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಟ್ರಾನ್ಸ್​ಫರ್ ಕೌನ್ಸಿಲಿಂಗ್ ನಡೆಯುತ್ತಿದ್ದು ಬೆಳಗ್ಗಿನ ಜಾವದವರೆಗೂ ನಡೆಯುತ್ತಿರುವ ಕಾರ್ಯಕ್ರಮದಿಂದ ಬಳಲಿದ ಪೊಲೀಸರು ಕಮೀಷನರ್ ಕಛೇರಿಯ ವರಾಂಡದಲ್ಲೇ ಮಲಗಿದ್ದಾರೆ.

- Advertisement -

ಬೆಂಗಳೂರಿನಲ್ಲಿ 5 ವರ್ಷ ಕೆಲಸ ಮಾಡಿ HC ಮತ್ತು PC ಗಳ ವರ್ಗಾವಣೆ ಮತ್ತು ಒಂದೇ ಠಾಣೆಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗಳ ವರ್ಗಾವಣೆ ಬಗ್ಗೆ ಕಳೆದ ಒಂದು ವಾರದಿಂದ ಕೌನ್ಸಿಲಿಂಗ್ ನಡೆಯುತ್ತಿದ್ದು ಪೊಲೀಸರು ಸಂಪೂರ್ಣ ಸುಸ್ತಾಗಿ ಸಿಕ್ಕಸಿಕ್ಕಲ್ಲೇ ನಿದ್ರೆಗೆ ಜಾರಿದ್ದಾರೆ.

Join Whatsapp