ತರಬೇತಿ ವಿಮಾನ ಪತನ: ಮಹಿಳಾ ಪೈಲಟ್, ಟ್ರೈನಿ ಪೈಲಟ್ ಮೃತ್ಯು

Prasthutha|

 ತೆಲಂಗಾಣ: ತರಬೇತಿ ವಿಮಾನ ಪತನವಾಗಿ ಮಹಿಳಾ ಪೈಲಟ್ ಮತ್ತು ಟ್ರೈನಿ ಪೈಲಟ್ ಸಾವನ್ನಪ್ಪಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದೆ.

- Advertisement -

ತರಬೇತಿ ವಿಮಾನವು ಒಮ್ಮೆಗೇ ನೆಲಕ್ಕೆ ಕುಸಿದಿದೆ. ವಿಮಾನ ನೆಲದ ಮೇಲೆ ಬಿದ್ದಾಕ್ಷಣ ಬೆಂಕಿ ಆವರಿಸಿದೆ. ಪರಿಣಾಮ ಪೈಲಟ್ ಮತ್ತು ಟ್ರೈನಿ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.



Join Whatsapp