ಸಿಡ್ನಿ: 30 ವರ್ಷದ ತರಬೇತಿ ನರ್ಸ್ ರಾಹುಲ್ ಕುಮಾರ್ ಎಂಬವರ ಮೇಲೆ ಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ಹಲ್ಲೆ ನಡೆಸಿದ್ದು ಇದೀಗ ಈ ದಾಳಿಯು ಮತ್ತೊಂದು ಸುತ್ತಿನ ಯುವ ಬೀದಿ ಜಗಳಗಳಕ್ಕೆ ಕಾರಣವಾಗಬಹುದು ಎಂದು ಸ್ಥಳೀಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ಲಸ್ ಫಿಟ್ನೆಸ್ ವೆಸ್ಟ್ಮೀಡ್ ನ ಹೊರಗೆ ತನ್ನ ಕಾರಿನ ಬಳಿಗೆ ಹೋಗುವಾಗ ಬ್ಯಾಟ್ ಗಳು ಮತ್ತು ಲೋಹದ ಕಂಬಗಳನ್ನು ಹೊತ್ತ ಆರು ಅಥವಾ ಜನರ ಗುಂಪು ರಾಹುಲ್ ಅವರ ಮೇಲೆ ದಾಳಿ ನಡೆಸಿದೆ
ಮಾಧ್ಯಮಗಳೊಂದಿಗೆ ಮಾತಾಡಿದ ರಾಹುಲ್ , ನಾನು ಕಾರಿನ ಬಳಿ ತೆರಳುತ್ತಿದ್ದಾಗ ಆರು ಅಥವಾ ಏಳು ಜನರ ಒಂದು ತಂಡವು ನನ್ನ ಮೇಲೆ ಏಕಾಏಕಿ ಅವರ ಕೈಯ್ಯಲ್ಲಿದ್ದ ಬ್ಯಾಟ್ ನಿಂದ ನನ್ನಮೇಲೆ ದಾಳಿ ಮಾಡಿದೆ.ಅವರು ನನ್ನನ್ನು ಕೆಟ್ಟದಾಗಿ ನಿಂದಿಸಿ ನನ್ನ ತಲೆ ಮತ್ತು ದೇಹದ ಬೇರೆ ಭಾಗಗಳಿಗೆ ಹೊಡೆದ ಕಾರಣ ತಲೆಯಲ್ಲಿ ರಕ್ತಸ್ರಾವವಾಗುತ್ತಿತ್ತು, ನನ್ನ ಅಂಗಿ ರಕ್ತದಲ್ಲಿ ಸಂಪೂರ್ಣವಾಗಿ ಕೆಂಪಾಗಿತ್ತು ಎಂದು ಹೇಳಿದರು.
ದಾಳಿಯ ಕಾರಣ ಇನ್ನೂ ಸ್ಪಷ್ಟವಾಗದ ಕಾರಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.