ಬೆಳಗಾವಿಯಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ

Prasthutha|

ಬೆಳಗಾವಿ: ತರಬೇತಿ ವಿಮಾನವೊಂದು ತುರ್ತು ಭೂಸ್ಪರ್ಶವಾದ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ, ಬಾಗೇವಾಡಿ ರಸ್ತೆ ಬದಿಯ ಹೊಲದಲ್ಲಿ ನಡೆದಿದೆ.

- Advertisement -


ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಏರ್ ಫೋರ್ಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.


ಸಾಂಬ್ರಾ ಏರ್ ಪೋರ್ಟ್ ನಿಂದ ಹೊರಟಿದ್ದ ರೆಡ್ ಬರ್ಡ್ ಸಂಸ್ಥೆಗೆ ಸೇರಿದ VT-RBF ತರಬೇತಿ ವಿಮಾನ ತಾಂತ್ರಿಕ ದೋಷದಿಂದ ಹೊನ್ನಿಹಾಳ ಹೊರವಲಯದ ಮೋದಗಾ, ಬಾಗೇವಾಡಿ ರಸ್ತೆ ಬದಿಯ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ. ತರಬೇತಿ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ದೊರೆತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Join Whatsapp