ಒಡಿಶಾ ರೈಲು ದುರಂತ | ಸಂತ್ರಸ್ತರಿಗೆ 10 ಕೋಟಿ ದೇಣಿಗೆ ಕೊಡ್ತೀನಿ ತಗೊಳ್ಳಿ : ರೈಲ್ವೆ ಸಚಿವರಿ​​ಗೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಮನವಿ

Prasthutha|

ಹೊಸದಿಲ್ಲಿ: ಜೂನ್ 2 ರಂದು ಒಡಿಶಾ ರೈಲು ದುರಂತದಲ್ಲಿ 288 ಜನರು ಸಾವನ್ನಪ್ಪಿದ ಕುಟುಂಬಗಳ ಸಂತ್ರಸ್ತರಿಗೆ ದೇಣಿಗೆಯಾಗಿ 10 ಕೋಟಿ ರೂಪಾಯಿಗಳನ್ನು ನೀಡುವೆ ಸ್ವೀಕರಿಸಿ ಎಂದು ಬಂಧಿತ ಆರೋಪಿ ಸುಕೇಶ್ ಚಂದ್ರಶೇಖರ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಈ ಕೊಡುಗೆಯು ನನ್ನ ಕಾನೂನುಬದ್ಧ ಗಳಿಕೆಯ ಮೂಲದಿಂದ ಬಂದ ನನ್ನ ವೈಯಕ್ತಿಕ ನಿಧಿಯಿಂದ ಬಂದಿದೆ. ಅದು ಸಂಪೂರ್ಣವಾಗಿ ತೆರಿಗೆಗೆ ಒಳಪಟ್ಟಿದೆ ಮತ್ತು ರಿಟರ್ನ್ಸ್ ಫೈಲಿಂಗ್‌ಗಳ ಜೊತೆಗೆ ದಾಖಲಾತಿಗಳನ್ನು 10 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ಒದಗಿಸುವೆ ಎಂದು ಚಂದ್ರಶೇಖರ್ ಹೇಳಿದ್ದಾನೆ. ಪ್ರಸ್ತುತ ತಾನು ಮಂಡೋಲಿ ಜೈಲಿನಲ್ಲಿರುವುದಾಗಿ ಆತ ನಿನ್ನೆ (ಶುಕ್ರವಾರ) ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರವು ಈಗಾಗಲೇ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲವನ್ನು ಒದಗಿಸುತ್ತಿರುವುದರಿಂದ, ನಾನು ಜವಾಬ್ದಾರಿಯುತ ಮತ್ತು ಉತ್ತಮ ನಾಗರಿಕನಾಗಿ ಈ 10 ಕೋಟಿ ರೂಪಾಯಿಗಳ ನಿಧಿಯನ್ನು ನಿರ್ದಿಷ್ಟವಾಗಿ ಆ ಕುಟುಂಬಗಳು/ಮಕ್ಕಳು, ನಮ್ಮ ಭವಿಷ್ಯದ ಯುವಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ಬಳಸಲು ನೀಡುತ್ತಿದ್ದೇನೆ. ಮೃತರ ಪ್ರತಿ ಮಗುವಿನ ಶಾಲೆ, ಪ್ರೌಢಶಾಲೆ, ಕಾಲೇಜು ಶಿಕ್ಷಣ ವೆಚ್ಚಗಳಿಗೆ ನಿರ್ದಿಷ್ಟವಾಗಿ ಬಳಸಬೇಕಾದ ಕೊಡುಗೆ ಇದಾಗಿದೆ ಎಂದು ಸುಕೇಶ್ ಚಂದ್ರಶೇಖರ್ ತಿಳಿಸಿದ್ದಾನೆ.

- Advertisement -

ಪ್ರತಿದಿನದ ಆಧಾರದ ಮೇಲೆ ನನ್ನ ಸಂಸ್ಥೆಯಾದ ಶಾರದಾ ಫೌಂಡೇಶನ್, ಚಂದ್ರಶೇಖರ್ ಕ್ಯಾನ್ಸರ್ ಫೌಂಡೇಶನ್, ಎಲ್ಎಸ್ ಶಿಕ್ಷಣ ಸಂಸ್ಥೆಗಳು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮುಖ್ಯವಾಗಿ ಆಹಾರದ ಕೊಡುಗೆಗಾಗಿ ದಕ್ಷಿಣ ಭಾರತದ ಐದು ರಾಜ್ಯಗಳ ನಿರ್ಗತಿಕರಿಗೆ ಕೊಡುಗೆ ನೀಡುತ್ತಿದೆ.

ಸರ್ ನಾನು ವಿನಮ್ರವಾಗಿ ಹೇಳಿದ ಉದ್ದೇಶಕ್ಕಾಗಿ ಕೊಡುಗೆಯನ್ನು ಸ್ವೀಕರಿಸಲು ವಿನಂತಿಸುತ್ತೇನೆ. ಡಿಮ್ಯಾಂಡ್​​ ಡ್ರಾಫ್ಟ್​​ ಸಿದ್ಧಪಡಿಸಬೇಕು. ಆದ್ದರಿಂದ ತಕ್ಷಣವೇ ಆದ್ಯತೆಯ ಮೇಲೆ ಅನುಮತಿ ಕೊಡಿ ಎಂದು ಅವರು ಕೋರಿದ್ದಾರೆ.

Join Whatsapp