ಸಂಚಾರ ನಿಯಮ ಉಲ್ಲಂಘನೆ: ಸವಾರರ ಮನೆಗೆ ಕ್ಯೂ ಆರ್ ಕೋಡ್ ಸಹಿತ ನೋಟಿಸ್

Prasthutha|

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರಿಗೆ ದಂಡ ಪಾವತಿಗೆ ನೋಟಿಸ್ ಕಳುಹಿಸಲು ನಗರ ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ನೋಟಿಸ್ ನಲ್ಲಿ ಕ್ಯೂ ಆರ್ ಕೋಡ್ ಅಳವಡಿಕೆ ಮಾಡಲಾಗಿದೆ.

- Advertisement -


ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇಂದಿನಿಂದ ಕ್ಯೂ ಆರ್ ಕೋಡ್ ಒಳಗೊಂಡಿರುವ ನೋಟಿಸ್ ಕಳುಹಿಸಲಾಗುತ್ತಿದೆ. ಆಟೊಮೇಷನ್ ಸೆಂಟರ್ ನಿಂದ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಅಂಚೆ ಮೂಲಕ ಸವಾರರ ಮನೆ ಬಾಗಿಲಿಗೆ ತಲುಪಲಿದೆ. ದಂಡ ಪಾವತಿಸಲು ಆನ್ ಲೈನ್ ಮೂಲಕ ಲಿಂಕ್ ಕಲ್ಪಿಸಲಾಗಿದೆ.

Join Whatsapp