ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ: ಮಾಜಿ ಸಿಎಂ ಫಡ್ನವೀಸ್ ಪತ್ನಿ ಹೇಳಿಕೆ

Prasthutha|

ಮುಂಬೈ: ಮುಂಬೈನಲ್ಲಿ ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬಳು ಸಾಮಾನ್ಯ ನಾಗರಿಕಳಾಗಿ ಈ ವಿಚಾರ ಹೇಳುತ್ತಿದ್ದೇನೆ. ಮುಂಬೈನಲ್ಲಿ ಟ್ರಾಫಿಕ್ ನಿಂದಾಗಿ ಅದೆಷ್ಟೋ ಜನರಿಗೆ ತಮ್ಮ ಕುಟುಂಬಕ್ಕೆ ಸಮಯಕೊಡಲು ಸಾಧ್ಯವಾಗುತ್ತಿಲ್ಲ. ಇದು ವಿಚ್ಛೇದನಕ್ಕೆ ಕಾರಣವಾಗುತ್ತಿದೆ. ವಾಣಿಜ್ಯ ನಗರಿಯಲ್ಲಿ ಶೇ.3ರಷ್ಟು ವಿಚ್ಛೇದನಗಳಿಗೆ ಟ್ರಾಫಿಕ್ ಕಾರಣವಾಗಿದೆ ಎಂದು ಹೇಳಿದ್ದಾರೆ.

ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮೂಲಕ ಅಮೃತಾ ಫಡ್ನವೀಸ್ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಅಮೃತಾ ಹೆಸರನ್ನು ಉಲ್ಲೇಖಿಸದೆ ಟ್ವೀಟ್ ಮಾಡಿದ ಅವರು, ಶೇ.3ರಷ್ಟು ಡಿವೋರ್ಸ್ ಗಳು ಟ್ರಾಫಿಕ್ ನಿಂದ ಆಗುತ್ತಿದೆ ಎಂದು ಹೇಳುತ್ತಿರುವ ಮಹಿಳೆಗೆ ಅತ್ಯುತ್ತಮ ಅತಾರ್ಕಿಕ ಪ್ರಶಸ್ತಿ ನೀಡಬೇಕು ಎಂದು ಹೇಳಿದ್ದಾರೆ.

- Advertisement -



Join Whatsapp