ಅಡ್ಡೂರು ಸೇತುವೆಯಲ್ಲಿ ಘನವಾಹನಗಳ‌ ಸಂಚಾರ ನಿಷೇಧ : ದ.ಕ ಜಿಲ್ಲಾಧಿಕಾರಿ‌ ಆದೇಶ

Prasthutha|

- Advertisement -

ಮಂಗಳೂರು: ಅಡ್ಡೂರು ಸೇತುವೆಯಲ್ಲಿ ಘನವಾಹನಗಳ‌ ಸಂಚಾರ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ‌ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಮಂಗಳೂರು ತಾಲೂಕಿನ ಸುರತ್ಕಲ್ ಕಬಕ ರಾಜ್ಯ ಹೆದ್ದಾರಿಯ ಪೊಳಲಿ ಸೇತುವೆಯು 1970 ರಲ್ಲಿ ನಿರ್ಮಾಣಗೊಂಡಿದ್ದು, ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಸಂಪರ್ಕಿಸುವ ಅತೀ ಮುಖ್ಯ ಸೇತುವೆಯಾಗಿರುತ್ತದೆ. ಸೇತುವೆಯನ್ನು ಪರಿವೀಕ್ಷಣೆ ಮಾಡಲಾಗಿದ್ದು, ಸೇತುವೆಯನ್ನು ದುರಸ್ತಿಪಡಿಸುವುದು ಅತೀ ಅವಶ್ಯಕ ಎಂದು ವರದಿ ನೀಡಿರುತ್ತಾರೆ. ಸೇತುವೆಯು ಅಪಾಯದ ಸ್ಥಿತಿಯಲ್ಲಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾಯ ಸಂಭವಿಸಬಹುದಾದ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿಷೇಧಿಸಲಾಗಿದೆ.

- Advertisement -

ಅಡ್ಡೂರು ಸೇತುವೆಯ ಮೂಲಕ ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ- 101ರ ರಸ್ತೆಯಲ್ಲಿ ಬಿ.ಸಿ.ರೋಡ್- ಪೊಳಲಿ-ಮಂಗಳೂರಿಗೆ ಸಂಚರಿಸುವ ಘನವಾಹನಗಳು ಈ ಕೆಳಗಿನಂತೆ ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ:

1) ಮಂಗಳೂರು-ಗುರುಪುರ ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಸಂಚರಿಸುವ ವಾಹನಗಳು:- ಮಂಗಳೂರು ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಬೈತುರ್ಲಿ ಬಸ್‌ಸ್ಟಾಪ್‌ನಿಂದ ಬೈತುರ್ಲಿ-ನೀರುಮಾರ್ಗ-ಕಲ್ಪನೆ ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕಲ್ಪನೆ ಜಂಕ್ಷನ್‌ಗೆ ಬಂದು ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ-101 ನ್ನು ಸಂಪರ್ಕಿಸಿ, ಪೊಳಲಿಗೆ ಹಾಗೂ ಬಿ.ಸಿ.ರೋಡ್‌ನ NH-75 ಗೆ ಸಂಚರಿಸುವುದು.

2) ಬಿ.ಸಿ.ರೋಡ್-ಪೊಳಲಿ ಕಡೆಯಿಂದ ಮಂಗಳೂರು-ಗುರುಪುರ ಕೈಕಂಬ ಕಡೆಗೆ
ಸುರತ್ಕಲ್ ಕಬಕ ರಾಜ್ಯ ಹೆದ್ದಾರಿ-101ರ ಕಲ್ಪನೆ ಎಂಬಲ್ಲಿ, ಕಲ್ಪನೆ-ನೀರುಮಾರ್ಗ-ಬೈತುರ್ಲಿ ಜಿಲ್ಲಾ ಮುಖ್ಯ ರಸ್ತೆಯ ಕಲ್ಪನೆ ರಸ್ತೆಯ ಮೂಲಕ ಬೈತುರ್ಲಿ ಬನ್‌ಸ್ವಾಪ್ ಎಂಬಲ್ಲಿ ಮಂಗಳೂರು-ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ-169 ನ್ನು ಸಂಪರ್ಕಿಸಿ, ಮಂಗಳೂರು- ಗುರುಪುರ ಕೈಕಂಬ ಕಡೆಗೆ ಸಂಚರಿಸುವುದು.

1) ಮಂಗಳೂರು-ಗುರುಪುರ ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಸಂಚರಿಸುವ ವಾಹನಗಳು ಮಂಗಳೂರು ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಬೈತುರ್ಲಿ ಬಸ್‌ಸ್ಟಾಪ್‌ನಿಂದ

ಬೈತುರ್ಲಿ-ನೀರುಮಾರ್ಗ-ಕಲ್ಪನೆ ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕಲ್ಪನೆ ಜಂಕ್ಷನ್‌ಗೆ ಬಂದು ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ-101 ನ್ನು ಸಂಪರ್ಕಿಸಿ, ಪೊಳಲಿಗೆ ಹಾಗೂ ಬಿ.ಸಿ.ರೋಡ್‌ನ NH-75 ಗೆ ಸಂಚರಿಸುವುದು.



Join Whatsapp