ರದ್ದಿ ಕಾಗದದ ಮೇಲೆ ಚಿಕನ್ ಮಾಂಸ ಕಟ್ಟಿಕೊಟ್ಟ ವ್ಯಾಪಾರಿಯ ಬಂಧನ

Prasthutha|

ಸಂಭಾಲ್ : ಹಿಂದೂ ದೇವತೆಗಳ ಚಿತ್ರವಿರುವ ರದ್ದಿ ಕಾಗದದ ಮೇಲೆ ಚಿಕನ್ ತುಂಡುಗಳನ್ನು ಗ್ರಾಹಕರಿಗೆ ಕಟ್ಟಿಕೊಟ್ಟ ಚಿಕನ್ ವ್ಯಾಪಾರಿಯನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತ ತಾಲಿಬ್ ಹುಸೇನ್ ತನ್ನ ಅಂಗಡಿಯಿಂದ ಕೋಳಿ ಮಾಂಸವನ್ನು ಕಟ್ಟಿಕೊಡುವ ರದ್ದಿ ಪೇಪರ್ ನಲ್ಲಿ ಹಿಂದೂ ದೇವರ ಚಿತ್ರವಿತ್ತೆನ್ನಲಾಗಿದೆ. ಹುಸೇನ್ ಅವರು ಚಿಕನ್ ಮಾಂಸವನ್ನು ಆ ರದ್ದಿ ಪೇಪರ್ ನಲ್ಲಿ ಕಟ್ಟಿ ಕೊಟ್ಟಿದ್ದರು. ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಕೆಲವರು ಭಾನುವಾರ ದೂರು ನೀಡಿದ ಬೆನ್ನಲ್ಲೇ ಹುಸೇನ್ ಅವರ ಬಂಧನ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ತಂಡವು ಅಂಗಡಿಯನ್ನು ತಲುಪಿದಾಗ, ಹುಸೇನ್ ಪೊಲೀಸರ ಮೇಲೆ ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಐಪಿಸಿ ಸೆಕ್ಷನ್ 153-ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಮತ್ತು 307 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Join Whatsapp