ಟೈಟಾನಿಕ್ ಅವಶೇಷ ನೋಡಲು ಹೋದ ಪ್ರವಾಸಿಗರು ಮೃತ್ಯು: ಅಮೆರಿಕದ ಕೋಸ್ಟ್ ಗಾರ್ಡ್

Prasthutha|

ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಅವಶೇಷಗಳ ಭೇಟಿಗೆ ತೆರಳಿದ್ದ ಜಲಾಂತರ್ಗಾಮಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.

- Advertisement -


ಕಂಪನಿಯ ಕಾರ್ಯನಿರ್ವಹಣಾಧಿಕಾರಿ ಸ್ಟಾಕ್ಟನ್ ರಶ್, ಶಹ್ಝಾದಾ ದಾವೂದ್ ಮತ್ತು ಅವರ ಪುತ್ರ ಸುಲೇಮಾನ್ ದಾವೂದ್, ಹಮೀಶ್ ಹಾರ್ಡಿಂಗ್ ಹಾಗೂ ಪೌಲ್ ಹೆನ್ರಿ ನರ್ಗಿಯೊಲೇಟ್ ಮೃತಪಟ್ಟಿದ್ದಾರೆ. ಈ ಕುರಿತು ಓಷಿಯನ್ ಗೇಟ್ ಎಕ್ಸ್ ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್ ಟನ್ ರಶ್ ಸೇರಿದಂತೆ ಸಬ್ ಮಾರ್ಸಿಬಲ್ ನಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ತಿಳಿಸಿದೆ.

ಜಲಾಂತರ್ಗಾಮಿ ನೌಕೆಗೆ ಅತ್ಯಗತ್ಯವಾಗಿದ್ದ 96 ಗಂಟೆಗಳ ಉಸಿರಾಟದ ಗಾಳಿ ಖಾಲಿಯಾಗಿರುವ ಸಾಧ್ಯತೆ ಇದೆ. ಸಾಗರ ತಳದಲ್ಲಿ ದೂರನಿಯಂತ್ರಿತ ರೊಬೊಟ್ ಕಾರ್ಯಾಚರಣೆ ನಡೆಸುವ ಮೂಲಕ ಅವಶೇಷಗಳನ್ನು ಪತ್ತೆ ಹಚ್ಚಲಾಗಿದ್ದು, ಅದನ್ನು ಮೌಲ್ಯಮಾಪನ ಮಾಡಬೇಕಿದೆ ಎಂದು ಅಮೆರಿಕಾ ಕೋಸ್ಟ್ ಗಾರ್ಡ್ ಹೇಳಿದೆ.