ಸೌದಿ ಅರೇಬಿಯಾದಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ಪ್ರವಾಸಿ ಕುಟುಂಬ

Prasthutha|

ಚಿಕ್ಕಮಗಳೂರು: ದೇಶಾದ್ಯಂತ ಸ್ವಾತಂತ್ರೋತ್ಸ ಸಂಭ್ರಮ ಮನೆಮಾಡಿದೆ. ಅದರಲ್ಲೂ ದೇಶ ಬಿಟ್ಟು ಹೊರ ದೇಶಕ್ಕೆ ಉದ್ಯೋಗಕ್ಕೆ  ಹೋದ ಭಾರತೀಯರು ಸಹ ಉತ್ಸಾಹದಿಂದ   ಸಂಭ್ರಮದ ಸ್ವಾತಂತ್ರ್ಯ ದಿನ  ಆಚರಿಸಿದ್ದಾರೆ. 

- Advertisement -

ಚಿಕ್ಕಮಗಳೂರು ಮೂಡಿಗೆರೆ ನಿವಾಸಿ ಫರ್ವೇಝ್  ಖಾನ್ ಉದ್ಯೋಗದ  ನಿಮಿತ್ತ ಕುಟುಂಬ ಸಮೇತ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ. ಇಡೀ ಕುಟುಂಬ ಇಂದು ಸೌದಿ ಅರೇಬಿಯಾದಲ್ಲಿ  ರಾಷ್ಟ್ರ ಧ್ವಜವನ್ನು  ಕಾರಿಗೆ  ಕಟ್ಟಿ, ಜೊತೆಗೆ  ಮಕ್ಕಳು ತನ್ನ ಸೈಕಲ್ ಗೆ ಕಟ್ಟಿ  75ನೇ ಸ್ವಾತಂತ್ರೋತ್ಸವ ಸಂಭ್ರಮ ಆಚರಿಸಿ‌ ದೇಶ ಪ್ರೇಮ ಮೆರೆದಿದ್ದಾರೆ.

ಭಾರತ್ ಮಾತಾಕಿ ಜೈ ಘೋಷಣೆ ಕೂಗಿ,  ರಾಷ್ಟ್ರ ಗೀತೆ ಹಾಡಿ,  ಸಂಭ್ರಮಿಸಿದರು.

Join Whatsapp