ಟೂಲ್ ಕಿಟ್ ಪ್ರಕರಣ | ಬಂಧಿತ ದಿಶಾ ರವಿ ಪರ ಗ್ರೆಟಾ ಥನ್ಬರ್ಗ್ ಪ್ರತಿಕ್ರಿಯೆ

Prasthutha|

ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ರೂಪುರೇಷೆ ಒಳಗೊಂಡಿತ್ತು ಎನ್ನಲಾದ ‘ಟೂಲ್ ಕಿಟ್’ ಪ್ರಕರಣದಲ್ಲಿ ಬಂಧಿತರಾದ ದಿಶಾ ರವಿ ಪರವಾಗಿ ಅಂತಾರಾಷ್ಟ್ರೀಯ ಹವಾಮಾನ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಪ್ರತಿಕ್ರಿಯೆ ನೀಡಿದ್ದಾರೆ. ರೈತ ಹೋರಾಟ ಕುರಿತ ‘ಟೂಲ್ ಕಿಟ್’ ಗ್ರೆಟಾ ಟ್ವಿಟರ್ ನಲ್ಲಿ ಶೇರ್ ಮಾಡಿದ ಹಿನ್ನೆಲೆಯಲ್ಲಿ, ಗರಂ ಆದ ಸರಕಾರ ಈ ಕುರಿತು ತನಿಖೆ ಆರಂಭಿಸಿ, ದಿಶಾ ರವಿ ಅವರನ್ನು ಬಂಧಿಸಿದೆ.

- Advertisement -

ದಿಶಾ ರವಿ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಟ್ವೀಟ್ ಮಾಡಿರುವ ಗ್ರೆಟಾ, “ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಹಕ್ಕು ಹಾಗೂ ಜತೆಗೂಡುವುದು ಬದಲಿಸಲು ಸಾಧ್ಯವಿಲ್ಲದ ಮಾನವ ಹಕ್ಕುಗಳು. ಇದು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಭಾಗವಾಗಿರಬೇಕು” ಎಂದು ಹೇಳಿದ್ದಾರೆ.

ಅಲ್ಲದೆ, ಸ್ವಾಂಡ್ ವಿತ್ ದಿಶಾ ರವಿ ಎಂಬ ಹ್ಯಾಶ್ ಟ್ಯಾಗ್ ಕೂಡ ಬಳಸಿದ್ದಾರೆ. ಫ್ರೈಡೇಸ್ ಫಾರ್ ಫ್ಯೂಚರ್ ಸಂಸ್ಥೆಯ ಭಾರತ ಘಟಕದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

- Advertisement -

“ನಾವು ನಮ್ಮ ಯೋಜನೆಯಲ್ಲಿ ಅಚಲವಾಗಿದ್ದೇವೆ. ನಮ್ಮ ಪರಿಸರವನ್ನು ರಕ್ಷಿಸಲು ಶಾಂತಿಯುತ ಹಾಗೂ ಸಕ್ರಿಯವಾಗಿ ಇರುವುದನ್ನು ಮುಂದುವರಿಸುವ ಗುರಿ ಹೊಂದಿದ್ದೇವೆ” ಎಂದು ಸಂಸ್ಥೆ ಹೇಳಿಕೆ ನೀಡಿತ್ತು.

ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿಶಾ ರವಿ ಅವರನ್ನು ದೆಹಲಿಯಲ್ಲಿ ಪಟಿಯಾಲಾ ಹೌಸ್ ನ್ಯಾಯಾಲಯವು ಶುಕ್ರವಾರದ ವಿಚಾರಣೆ ಬಳಿಕ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.  

Join Whatsapp