ಟೂಲ್ ಕಿಟ್ ಕೇಸ್ | ದಿಶಾ ರವಿಗೆ ಮೂರು ದಿನ ನ್ಯಾಯಾಂಗ ಬಂಧನ

Prasthutha|

ನವದೆಹಲಿ : ರೈತ ಹೋರಾಟಕ್ಕೆ ಸಂಬಂಧಿಸಿದ ರೂಪುರೇಷೆ ಒಳಗೊಂಡಿತ್ತು ಎನ್ನಲಾದ ‘ಟೂಲ್ ಕಿಟ್’ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಬೆಂಗಳೂರಿನ ದಿಶಾ ರವಿಗೆ ದೆಹಲಿ ಕೋರ್ಟ್ ಮೂರು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

ದಿಶಾ ರವಿ ಅವರನ್ನು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಸಹ ಆರೋಪಿಗಳೊಂದಿಗೆ ವಿಚಾರಣೆ ಮಾಡುವುದಿದೆ, ಹೀಗಾಗಿ ಆಕೆಯನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಕೋರಿದ್ದರು.

ಇದಕ್ಕೂ ಮೊದಲು, ದಿಶಾ ರವಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಸಂಬಂಧಿಸಿ ತೀರ್ಪು ನೀಡಿದ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಮಾಧ್ಯಮಗಳಿಗೆ ವಿವರಣೆ ನೀಡಲು ಅವಕಾಶ ನೀಡಿತು. ಟೂಲ್ ಕಿಟ್ ಪ್ರಕರಣದಲ್ಲಿ ತನ್ನ ಕುರಿತ ತನಿಖೆಯ ವಿಚಾರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ನಿರ್ದೇಶಿಸುವಂತೆ ದಿಶಾ ರವಿ ತಮ್ಮ ಅರ್ಜಿಯಲ್ಲಿ ಕೋರ್ಟ್ ಗೆ ಮನವಿ ಮಾಡಿದ್ದರು.

- Advertisement -

ಇಲ್ಲಿ ವರೆಗೆ ಅರ್ಜಿದಾರರ ಹಕ್ಕುಗಳು ಉಲ್ಲಂಘನೆಯಾಗದಿರುವುದರಿಂದ, ಪೊಲೀಸರು ಮಾಧ್ಯಮ ವಿವರಣೆ ನೀಡಬಹುದು ಎಂದು ಕೋರ್ಟ್ ತಿಳಿಸಿತು. ಆದರೆ, ಮಾಧ್ಯಮಗಳು ಪೊಲೀಸ್ ತನಿಖೆಗೆ ಧಕ್ಕೆಯಾಗದಂತೆ ತಮ್ಮ ವರದಿಗಳನ್ನು ಮಾಡುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕೋರ್ಟ್ ಸಲಹೆ ನೀಡಿತು.

Join Whatsapp