ಮಂಗಳೂರು: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹದಿನಾರನೇ ಸಂಸ್ಥಾಪನಾ ದಿನಾಚರಣೆ ನಾಳೆ ಜೂನ್ 21 ಶುಕ್ರವಾರದಂದು ದೇಶಾದ್ಯಂತ ನಡೆಯಲಿದೆ. ಸ್ವಾಬಿಮಾದ ರಾಜಕೀಯಕ್ಕೆ ಹದಿನೈದು ವರ್ಷಗಳು ಎಂಬ ಘೋಷಣೆಯೊಂದಿಗೆ ನಡೆಯಲಿರುವ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧತೆಗಳು ನಡೆದಿದೆ.
ಶುಕ್ರವಾರ ಬೆಳಿಗ್ಗೆ ಜಿಲ್ಲೆಯಲ್ಲಿ ಬೂತ್ ಸಮಿತಿಯಿಂದ ಜಿಲ್ಲಾ ಸಮಿತಿವರೆಗೆ ಎಲ್ಲಾ ಸ್ತರದ ಸಮಿತಿ ವತಿಯಿಂದ ಪಕ್ಷದ ಧ್ವಜಾರೋಹಣ ಮತ್ತು ಸಂದೇಶ ಕಾರ್ಯಕ್ರಮ, ಸಿಹಿತಿಂಡಿ ವಿತರಣೆ ನಡೆಯಲಿದೆ.
ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಒಂದು ವಾರಗಳ ಕಾಲ ಜಿಲ್ಲೆಯ ವಿವಿಧೆಡೆ ಪಕ್ಷದ ವತಿಯಿಂದ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಅರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಪಕ್ಷದ ಹಿತೈಷಿಗಳು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು SDPI ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ