ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ 13 ನೇ ಸಂಸ್ಥಾಪನಾ ದಿನಾಚರಣೆಯು ಜೂನ್ 21 ರಂದು ನಡೆಯಲಿದೆ. ಸ್ವಾಭಿಮಾನಿ ರಾಜಕೀಯದ ಹದಿಮೂರು ವರ್ಷಗಳು ಎಂಬ ಘೋಷಣೆಯೊಂದಿಗೆ ಸ್ವತಂತ್ರ ರಾಜಕಾರಣದತ್ತ ಮುನ್ನಡೆಯೋಣ ಎಂಬ ಸಂಕಲ್ಪದೊಂದಿಗೆ ಈ ದಿನವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುವುದು.
ಅದರ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೂತ್ ಮಟ್ಟದಿಂದ ಜಿಲ್ಲಾ ಸಮಿತಿಯ ವರೆಗಿನ ಎಲ್ಲಾ ಸ್ಥರಗಳಲ್ಲೂ ಪಕ್ಷದ ಧ್ವಜಾರೋಹಣ, ಸಿಹಿತಿಂಡಿ ವಿತರಣೆ, ಸಾರ್ವಜನಿಕ ರಸ್ತೆ, ಚರಂಡಿ, ಶಾಲಾ ವಠಾರ, ಆಸ್ಪತ್ರೆ ವಠಾರ ಸ್ವಚ್ಛತೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಆರೋಗ್ಯ ಶಿಬಿರ, ಬಡವರಿಗೆ ಆಹಾರ ಕಿಟ್ ವಿತರಣೆಯಂತಹ ಸಾಮಾಜಿಕ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.