ಮಂಗಳೂರು: ರಾಜ್ಯದಲ್ಲಿ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ರೈತರ ಬೆಳೆಗಳು ನಾಶಗೊಂಡಿವೆ. ಇದರ ಪರಿಣಾಮವಾಗಿ ಮಂಗಳೂರು ಮಾರುಕಟ್ಟೆಯಲ್ಲಿ ಟೊಮೆಟೋ ದರ ಗಗನಕ್ಕೇರಿದ್ದು, ಪ್ರತಿ ಕೆಜಿಗೆ 100 ರೂ ಏರಿಕೆ ಕಂಡಿದ್ದು ಇತಿಹಾಸ ಸೃಷ್ಟಿಸಿದೆ.
ಚಿಕ್ಕಮಗಳೂರು, ಬೆಂಗಳೂರು , ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಮಂಗಳೂರಿಗೆ ಟೊಮೆಟೊ ಆಮದು ಮಾಡಿಕೊಳ್ಳಲಾಗುತ್ತದೆ. ರೈತರು ಬೆಳೆಸಿರುವ ಬೆಳೆಗಳು ಮಳೆಯ ಹೊಡೆತಕ್ಕೆ ನಾಶಗೊಂಡ ಪರಿಣಾಮ ಟೊಮೆಟೊ ದರ ಶತಕ ಬಾರಿಸಿದೆ.
ಮಂಗಳೂರು ಎಪಿಎಂಸಿಯಲ್ಲಿ ಶುಕ್ರವಾರ 25 ಕೆ.ಜಿ.ಯ ಬಾಕ್ಸ್ ಟೊಮೆಟೊ 1800 ದರ ಮಾರಾಟವಾಗುತ್ತಿತ್ತು. ನಿನ್ನೆ ಒಂದು ಬಾಕ್ಸ್ ಗೆ 2000 ರೂ. ಇತ್ತು ಎಂದು ವ್ಯಾಪಾರಿ ಸಿದ್ದೀಕ್ ಮುಲ್ಕಿ ತಿಳಿಸಿದ್ದಾರೆ. ಚಿಲ್ಲರೆ ವ್ಯಾಪಾರಸ್ಥರು ಪ್ರತಿ ಕೆ.ಜಿಗೆ 100 ರೂ.ಯಂತೆ ಮಾರಾಟ ಮಾಡುತ್ತಿದ್ದಾರೆ.