ರಾಜ್ಯದಲ್ಲಿ ಸತತ ಮಳೆಗೆ ಗಗನಕ್ಕೇರಿದ ಟೊಮೆಟೊ ಬೆಲೆ !

Prasthutha|

ತುಮಕೂರು: ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಟೊಮೆಟೊ ಬೆಲೆ ಗಗನಕ್ಕೇರಿದೆ.

- Advertisement -

ದಿಢೀರನೇ ಒಂದು ಕೆಜಿ ಟೊಮೆಟೊಗೆ 90 ರಿಂದ 100 ರೂಪಾಯಿ ಬೆಲೆ ಏರಿಕೆಯಾಗಿದೆ.

ಮಳೆಯ ಪರಿಣಾಮ ರೈತರು ಬೆಳೆದ ಬೆಳೆ ನಾಶವಾಗುತ್ತಿದೆ. ಅದರಲ್ಲೂ ಟೊಮೆಟೊ ಬೆಳೆ ಹೊಲದಲ್ಲೇ ಕೊಳೆಯುತ್ತಿದೆ. ಹೀಗಾಗಿ ಟೊಮೆಟೊ ದರ ಗಗನಕ್ಕೇರಿದೆ.

- Advertisement -

ಕಳೆದ ಎರಡು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ಹೆಬ್ಬೂರು, ಗುಬ್ಬಿ, ಹೊನ್ನುಡಿಕೆ, ಉರ್ಡಿಗೆರೆ, ಕೊರಟಗೆರೆ, ತಿಪಟೂರು ಕಡೆಯಿಂದ ಅತಿಹೆಚ್ಚು ಮಾರುಕಟ್ಟೆಗೆ ಟೊಮೆಟೊ ಬರುತ್ತಿತ್ತು. ಮಾರುಕಟ್ಟೆಗೆ ದಿನಕ್ಕೆ ಐದಾರು ಲಾರಿಯಲ್ಲಿ ಟೊಮೆಟೊ ಬರುತ್ತಿತ್ತು. ಆದರೆ ಸದ್ಯ ಒಂದು ಲಾರಿಯಲ್ಲಿ ಮಾತ್ರ ಬರುತ್ತಿದೆ. ಟೊಮೆಟೊ ದರ ಏರಿಕೆಯಾಗಿರುವ ಕಾರಣ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಇದೇ ರೀತಿ ಮಳೆ ಮುಂದುವರೆದರೆ, ಮತ್ತೆ ಟೊಮೆಟೊ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Join Whatsapp