ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಡಬಲ್ ಸೆಂಚುರಿ ದಾಟಿದ್ದ ಟೊಮೆಟೋ ಬೆಲೆ ಇದೀಗ 250ರ ಗಡಿ ದಾಟಿದೆ.
ಸದ್ಯಕ್ಕೆ ಈ ಓಟ ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ಹೋಲ್‍ಸೇಲ್ ಮಾರುಕಟ್ಟೆ ಪರಿಣಿತರ ಪ್ರಕಾರ ಟೊಮೆಟೋ ಬೆಲೆ ಶೀಘ್ರವೇ ಮುನ್ನೂರರ ಗಡಿಯನ್ನು ದಾಟಲಿದೆ. ಇದಕ್ಕೆ ಮಳೆ, ಟೊಮೆಟೋ ಗುಣಮಟ್ಟ, ಪೂರೈಕೆ ಮತ್ತು ಸಾಗಣೆ ಸಮಸ್ಯೆಗಳು ಕಾರಣ ಎನ್ನಲಾಗುತ್ತಿದೆ.
ಈ ಮಧ್ಯೆ ಚಾಮರಾಜನಗರದ ಕೆಬ್ಬೆಪುರದಲ್ಲಿ ಮಂಜು ಎನ್ನುವ ರೈತ ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೆಟೋ ಗಿಡಗಳನ್ನು ಕಿಡಿಗೇಡಿಗಳು ಬುಡಸಮೇತ ಕತ್ತರಿಸಿ ಹಾಕಿದ್ದಾರೆ. ಟೊಮೆಟೋ ಕೊಯ್ಲಿಗೆ ಬಂದ ಸಂದರ್ಭದಲ್ಲಿ ದುಷ್ಕರ್ಮಿಗಳು ನಡೆಸಿದ ಕೃತ್ಯದಿಂದ ರೈತ ಮಂಜು ಕಂಗಾಲಾಗಿದ್ದಾರೆ. ಹೊಲದಲ್ಲಿ ಬಿದ್ದು ಹೊರಳಾಡಿ ಕಣ್ಣೀರಿಟ್ಟಿದ್ದಾರೆ.