ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಲೋಪದೋಷ ಸರಿಪಡಿಸುವ ತನಕ ಟೋಲ್ ಸಂಗ್ರಹಿಸಬಾರದು: ಸಚಿವ ಚಲುವರಾಯಸ್ವಾಮಿ

Prasthutha|

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಲೋಪದೋಷ ಸರಿಪಡಿಸುವ ತನಕ ಟೋಲ್ ಸಂಗ್ರಹಿಸಬಾರದು ಎಂದು ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

- Advertisement -

ಇಂದು ಮಂಡ್ಯ ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆಯಲ್ಲಿ ಶ್ರೀರಂಗಪಟ್ಟಣದ ಬಳಿ ಇರುವ ಲೋಪದೋಶಗಳನ್ನು ವಿವರಿಸಿದರು. ಆ ಭಾಗದಲ್ಲಿ ರೆಸ್ಟ್ ರೂಮಿಲ್ಲ, ಅಂಬ್ಯುಲೆನ್ಸ್ ಮತ್ತು ಕ್ರೇನ್ ಗಳ ವ್ಯವಸ್ಥೆ ಇಲ್ಲ. ಹೀಗೆ ಮೊದಲಾದ ಸಮಸ್ಯೆಗಳನ್ನು ಉಲ್ಲೇಖಿಸಿ ಅವುಗಳನ್ನು ಸರಿಪಡಿಸದ ಹೊರತು ಟೋಲ್ ಸಂಗ್ರಹಿಸುವಂತಿಲ್ಲ ಎಂದು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ಇವತ್ತು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆಯೆಂದು ಹೇಳಿದರು.