ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಎರಡನೇ ಪದಕ ತಂದುಕೊಟ್ಟ ಪಿ.ವಿ.ಸಿಂಧು

Prasthutha|

ಟೋಕಿಯೋ, ಆ.1: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಟೋಕಿಯೊ ಒಲಿಂಪಿಕ್ಸ್ ಸೆಮಿಫೈನಲ್ ನಲ್ಲಿ ಸೋತರೂ ಕಂಚಿನ ಪದಕವನ್ನು ಜಯಿಸಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.

- Advertisement -


ಒಲಿಂಪಿಕ್ಸ್‌ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಸಿಂಧು, ಸೆಮಿಫೈನಲ್‌ ನಲ್ಲಿ ಮುಗ್ಗರಿಸಿದ್ದರು. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಚೀನಾದ  ಹೀ ಬಿಂಗ್ ಜಿಯಾವೋ ಎದುರು 21-13, 21-15 ನೇರ ಗೇಮ್‌ ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕಂಚಿಕ ಪದಕ ತನ್ನದಾಗಿಸಿಕೊಂಡಿದ್ದಾರೆ.


ಮೊದಲ ಗೇಮ್‌ ನಲ್ಲಿ ಸಿಂಧು ಸತತ 4 ಅಂಕಗಳನ್ನು ಕಲೆಹಾಕುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಆದರೆ ಚೀನಾದ ಹೀ ಬಿಂಗ್ ಜಿಯಾವೋ ಕಮ್‌ ಬ್ಯಾಕ್‌ಮಾಡುವ ಮೂಲಕ 5-5ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಮೊದಲ ಗೇಮ್ ಅನ್ನು 21-13 ಅಂಕಗಳ ಅಂತರದಲ್ಲಿ ಸಿಂಧು ಕೈವಶ ಮಾಡಿಕೊಂಡರು.
ಇನ್ನು ಎರಡನೇ ಗೇಮ್‌ ನಲ್ಲೂ ಸಿಂಧು ಉತ್ತಮ ಪ್ರದರ್ಶನ ತೋರಿದರು. ಅಂತಿಮವಾಗಿ 21-15 ಅಂಕಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.

Join Whatsapp