ಟೋಕಿಯೊ ಒಲಿಂಪಿಕ್ಸ್: ಇಸ್ರೇಲ್‌ ನ ಸೆನಿಯಾ ಪೊಲಿಕರ್ಪೂವಾ ವಿರುದ್ಧ, ಪಿ.ವಿ. ಸಿಂಧು ಗೆಲುವು

Prasthutha|

ಟೋಕಿಯೊ: ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯಾಗಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದ್ದಾರೆ.

- Advertisement -

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ‘ಜೆ’ ಗುಂಪಿನ ಮೊದಲ ಹಣಾಹಣಿಯಲ್ಲಿ ಆರನೇ ಶ್ರೇಯಾಂಕಿತೆ ಸಿಂಧು ಅವರು ಇಸ್ರೇಲ್‌ ನ ಸೆನಿಯಾ ಪೊಲಿಕರ್ಪೂವಾ ವಿರುದ್ಧ 21-7 21-10ರ ಅಂತರದಲ್ಲಿ ಗೆಲುವು ದಾಖಲಿಸಿದರು.
26 ವರ್ಷದ ಸಿಂಧು ಪಂದ್ಯದುದ್ಧಕ್ಕೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಸುಲಭ ಗೆಲುವು ದಾಖಲಿಸಿದರು.2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.

ವಿಶ್ವ ನಂ. 7 ರ‍್ಯಾಂಕ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಅವರು ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ ನ 34ನೇ ರ‍್ಯಾಂಕ್ ಆಟಗಾರ್ತಿ ಚೆಯುಂಗ್ ಗಾನ್ ಯಿ ಸವಾಲನ್ನು ಎದುರಿಸಲಿದ್ದಾರೆ.



Join Whatsapp