ಟೋಕಿಯೋ, ಜು.29; ಹಾಲಿ ಚಾಂಪಿಯನ್‌ಅರ್ಜೆಂಟೀನಾ ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 3-1 ಗೋಲುಗಳ ಅಂತರದ ಜಯ ಸಾಧಿಸಿದ ಭಾರತ ಪುರುಷರ ಹಾಕಿ ತಂಡವು, ಒಲಿಂಪಿಕ್‌ಕ್ರೀಡಾಕೂಟದ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಗೋಲು ರಹಿತವಾಗಿ ಸಾಗಿದ್ದ ಪಂದ್ಯದಲ್ಲಿ ಭಾರತದ ವರುಣ್‌ಕುಮಾರ್‌ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಅವರು 43ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಬಾರಿಸಿದರು. ಬಳಿಕ ಅರ್ಜೆಂಟೀನಾದ ಸ್ಚುತ್‌ಕ್ಯಾಸೆಲ್ಲಾ ಅವರು ಪೆನಾಲ್ಟಿ ಕಾರ್ನರ್‌ಅವಕಾಶದಲ್ಲಿ ಗೋಲು ಗಿಟ್ಟಿಸಿ, ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು. ಆದರೆ, ವಿವೇಕ್‌ಸಾಗರ್‌ಪ್ರಸಾದ್(58ನೇ ನಿಮಿಷ) ಮತ್ತು ಹರ್ಮನ್ ಪ್ರೀತ್‌ಸಿಂಗ್(59ನೇ ನಿಮಿಷ) ಭಾರತ ಪರ ಮತ್ತೆರಡು ಗೋಲುಗಳನ್ನು ದಾಖಲಿಸಿ ತಂಡದ ಗೆಲುವನ್ನು ಖಾತ್ರಿ ಪಡಿಸಿದರು.
ಇದರೊಂದಿಗೆ ಭಾರತ ತಂಡವು ‘ಎ’ ಗುಂಪಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲು ಅನುಭವಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.
ಭಾರತ ತನ್ನ ಮುಂದಿನ ಪಂದ್ಯದಲ್ಲಿ ಆತಿಥೇಯ ಜಪಾನ್‌ವಿರುದ್ಧ ಶುಕ್ರವಾರ ಸೆಣಸಾಟ ನಡೆಸಲಿದೆ