ಬಾಯ್‌ ಫ್ರೆಂಡ್ ಜೊತೆ ಸೇರಿ ಸ್ವಂತ ಮಗುವಿಗೆ ನಿರಂತರ ಹಲ್ಲೆ: FIR ದಾಖಲು

Prasthutha|

,ಬೆಂಗಳೂರು: ತಾಯಿಯೋ.. ರಾಕ್ಷಸಿಯೋ.. ಬಾಯ್‌ ಫ್ರೆಂಡ್ ಜೊತೆ ಸೇರಿ ತಾಯಿಯೊಬ್ಬಳು ತನ್ನ 3 ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಎರಡು ವಾರಗಳ ಬಳಿಕ ಬೆಳಕಿಗೆ ಬಂದಿದೆ. ಮಗುವಿನ ಮಾತು ಕೇಳಿದ ಜನರು ಹೀಗೂ ಉಂಟೇ ಎಂದು ನೋವಿನ ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -

ಬೆಂಗಳೂರಿನ ಗಿರಿನಗರದ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ ಎನ್ನಲಾದ ವೀಡಿಯೋವೊಂದು ವೈರಲ್ ಆಗಿದ್ದು, ಪುಟ್ಟ ಕಂದಮ್ಮನ ಮೇಲೆ ಪಾಪಿ ತಾಯಿ ಹಲ್ಲೆ ನಡೆಸಿದ್ದಾಳೆ.

ಈ ಸಂಬಂಧ ಸಚಿವೆಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದು,ಮಗುವಿನ ಮೇಲೆ ಹಲ್ಲೆ ನಡೆಸಿದ ಮಹಿಳೆ ಮೇಲೆ FIR ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

- Advertisement -

ಹಲ್ಲೆ ನಡೆಸಿದ ಪರಿಣಾಮ ಮಗುವಿನ ದೇಹದ ತುಂಬೆಲ್ಲಾ ಗಾಯದ ಗುರುತುಗಳಾಗಿವೆ. ತಾಯಿ ಕೆಲಸಕ್ಕೆ ಹೋಗುತ್ತಿದ್ದು, ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಬೀಗ ಹಾಕಿ ಹೋದರೆ ರಾತ್ರಿ ಬರೋವರೆಗೂ ಮಗುವನ್ನು ಕೂಡಿ ಹಾಕಿರುತ್ತಿದ್ದಳು. ಅಲ್ಲದೇ ಮಗುವಿನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾಳೆ

ಈ ಘಟನೆ ಎರಡು ವಾರಗಳ ಹಿಂದೆ ನಡೆದಿದೆ ಎನ್ನಲಾಗುತ್ತಿದೆ. ಕೆಲಸ ಹುಡುಕುವಾಗ ತಾಯಿ ತನ್ನ ಮಗುವನ್ನು ಮನೆಯಲ್ಲೇ ಕೂಡಿಹಾಕಿದ್ದಾಳೆ. ಈ ಕುರಿತು ಮಗುವಿನ ತಾಯಿಯನ್ನು ಪ್ರಶ್ನಿಸಿದಾಗ, ತಾನು ಗಂಡನ ಜೊತೆ ವಾಸ ಮಾಡುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನು ಕೂಡಿಹಾಕಿ ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ.

ಮಧ್ಯಾಹ್ನ ಮಗುವಿಗೆ ಊಟ ಕೊಡಲು ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದು, ಸದ್ಯ ಈ ಬಗ್ಗೆ ಮಗುವಿನ ತಾಯಿಯನ್ನು ಕರೆಸಿ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಮಗುವನ್ನು ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಿದ್ದಾರೆ. ಗಂಡ, ಹೆಂಡತಿ ಇಬ್ಬರೂ ಬಂದು ಕೌನ್ಸಿಲಿಂಗ್‌ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಗಂಡ-ಹೆಂಡತಿ ಇಬ್ಬರೂ ಬಂದು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರಷ್ಟೇ ಮಗು ನೀಡುವುದಾಗಿ ಮಕ್ಕಳ ಆಯೋಗ ಹೇಳಿದೆ. ಸದ್ಯ ಹಲ್ಲೆಗೊಳಗಾಗಿರುವ ಮಗು ಮಕ್ಕಳ ಆಯೋಗದ ರಕ್ಷಣೆಯಲ್ಲಿದೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.

Join Whatsapp