ಇಂದು ಗಣರಾಜ್ಯೋತ್ಸವದ ಬೀಟಿಂಗ್‌ ರೀಟ್ರೀಟ್‌ ಕಾರ್ಯಕ್ರಮ

Prasthutha|

ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ವಿಜಯ್ ಚೌಕ್‌ನಲ್ಲಿ ಇಂದು ‘ಬೀಟಿಂಗ್‌ ರೀಟ್ರೀಟ್‌’ ಕಾರ್ಯಕ್ರಮ ನಡೆಯಲಿದೆ.

- Advertisement -

ಸೇನಾಪಡೆ ಮತ್ತು ಅರೆಸೇನಾಪಡೆಯ ಬ್ಯಾಂಡ್‌ಗಳು ನುಡಿಸುವ ಭಾರತೀಯ ಗೀತೆಗಳಿಗೆ ರೈಸಿನಾ ಹಿಲ್ಸ್‌ ಸಾಕ್ಷಿಯಾಗಲಿದೆ.

ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಸಿಆರ್‌ಪಿಎಫ್‌ನ ಬ್ಯಾಂಡ್‌ಗಳು 31 ಭಾರತೀಯ ಗೀತೆಗಳನ್ನು ನುಡಿಸಲಿವೆ.

- Advertisement -

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ.

Join Whatsapp