ಇಂದು ರಾಷ್ಟ್ರೀಯ ಸೋದರಸಂಬಂಧಿಗಳ ದಿನವಾಗಿದ್ದು, ಸೋದರಸಂಬಂಧಿಗಳೊಂದಿಗಿನ ಎಲ್ಲಾ ನೆನಪುಗಳನ್ನು ಮೆಲುಕು ಹಾಕುವ ದಿನವಾಗಿದೆ.
ಪ್ರತಿ ವರ್ಷ ಜುಲೈ 24 ರಂದು ರಾಷ್ಟ್ರೀಯ ಸೋದರಸಂಬಂಧಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸೋದರಸಂಬಂಧಿಗಳಲ್ಲಿ ಬೆಳೆಯುವ ಜೀವನಪರ್ಯಂತದ ಸಂಬಂಧವನ್ನು ಗುರುತಿಸುತ್ತದೆ.
ಕಸಿನ್ಸ್ ಗಳು ಎಂದು ಕರೆಯಲ್ಪಡುವ ಕುಟುಂಬ ಸದಸ್ಯರ ದಿನವಾಗಿದೆ ಇಂದು. ಎಲ್ಲರ ಜೀವನದ ಮೊದಲ ಪ್ರತಿಸ್ಪರ್ಧಿ ಮತ್ತು ಆಪ್ತರು ಸೋದರಸಂಬಂಧಿಗಳು ಆಗಿರುತ್ತಾರೆ. ಬಾಲ್ಯದ ಸ್ನೇಹಿತರೂ ಶತ್ರುಗಳೂ ಎರಡೂ ಅವರೇ ಆಗಿರುತ್ತಾರೆ. ಬಳಿಕ ಅವರ ಮಧ್ಯೆ ಸಂಬಂಧಕ್ಕೂ ಮೀರಿದ ಆಪ್ತತೆ ಬೆಳೆಯುವುದರಿಂದ ಕಸಿನ್ಸ್ ಗಳಿಗಾಗಿಯೇ ಇಂದಿನ ದಿನವನ್ನು ಆಚರಿಸಲಾಗುತ್ತದೆ.