ತೆರೆದ ಸ್ಥಳದಲ್ಲಿ ನಮಾಝ್ ವಿರೋಧಿಸಿ ಗುರ್ಗಾಂವ್ ನ ನಡುರಸ್ತೆಯಲ್ಲೇ ಭಜನೆ ಆರಂಭಿಸಿದ ಹಿಂದುತ್ವವಾದಿಗಳು

Prasthutha|

ಹರ್ಯಾಣ: ತೆರೆದ ಸ್ಥಳದಲ್ಲಿ ಶುಕ್ರವಾರ ನಮಾಝ್ ನಿರ್ವಹಿಸಿದ್ದಕ್ಕೆ ಪ್ರತಿಯಾಗಿ ಗುರ್ಗಾಂವ್ ನ ಹಿಂದುತ್ವವಾದಿಗಳು ನಡುರಸ್ತೆಯಲ್ಲೇ ಭಜನೆ ನಡೆಸಿದ ಘಟನೆ ವರದಿಯಾಗಿದೆ.

- Advertisement -

ಗುರ್ಗಾಂವ್ ನಲ್ಲಿ ಶುಕ್ರವಾರ ನಡೆಸುತ್ತಿದ್ದ ಸಾರ್ವಜನಿಕ ನಮಾಝ್ ನಿರ್ವಹಿಸುವುದನ್ನು ವಿರೋಧಿಸಿ ಹಿಂದುತ್ವವಾದಿಗಳು ಸತತ ನಾಲ್ಕು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾರ್ಥಿನಾ ಸ್ಥಳವನ್ನು ಪೊಲೀಸರು ಅದರ ಮೂಲ ಸ್ಥಳದಿಂದ 100 ಮೀಟರ್ ಸ್ಥಳಾಂತರಿಸಿದ್ದರು.

ಈ ಮಧ್ಯೆ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ನಿನ್ನೆ ಪಾರ್ಥನೆ ಸಲ್ಲಿಸಲಾಗಿತ್ತು. ಕನಿಷ್ಠ 70 – 80 ಹಿಂದುತ್ವವಾದಿಗಳು ಫಲಕಗಳನ್ನು ಹಿಡಿದುಕೊಂಡು ಘೋಷನೆ ಕೂಗಿ ಪ್ರಾರ್ಥನಾ ಸ್ಥಳಕ್ಕೆ ಜಾಥಾ ನಡೆಸಿದ್ದರು.

- Advertisement -

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಂಘರ್ಷವನ್ನು ತಪ್ಪಿಸಲು ಸುಭಾಷ್ ಚೌಕ್ ಕಡೆಯಿಂದ ಪ್ರಾರ್ಥನಾ ಸ್ಥಳವನ್ನು ತಲುಪುವಂತೆ ಪೊಲೀಸ್ ಉಪ ಆಯುಕ್ತ ಅಮನ್ ಯಾದವ್ ಅವರು ಮುಸ್ಲಿಮರಲ್ಲಿ ಮನವಿ ಮಾಡಿದರು. ಪ್ರಕ್ಷುಬ್ದ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎರಡೂ ಸಮುದಾಯದ ಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿ ಶೀಘ್ರದಲ್ಲೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ತಿಳಿಸಿದರು.

ಮುಸ್ಲಿಮರು ನಮಾಝ್ ನಿರ್ವಹಣೆಯನ್ನು ವಿರೋಧಿಸಿ ನಿನ್ನೆ ಮಧ್ಯಾಹ್ನ 12.40 ಕ್ಕೆ ಗುರ್ಗಾಂವ್ ನಿವಾಸಿಗಳು ಜಮಾಯಿಸಿ ಮೈಕ್ ಮತ್ತು ಪೋರ್ಟಬಲ್ ಸ್ಪೀಕರ್ ಬಳಸಿ ಹಿಂದೂ ಸಮುದಾಯದ ಧಾರ್ಮಿಕ ಹಾಡು ಮತ್ತು ಭಜನೆಯನ್ನು ಹಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ನಿರ್ವಹಣೆಗೆ ಸರ್ಕಾರ ಅನುಮತಿ ನೀಡಿದೆ ಅರೋಪಿಸಿ ಘೋಷಣೆ ಕೂಗಿ ದಾಂದಲೆ ನಡೆಸಿದ್ದರು.

ಕಳೆದ ಮೂರು ವರ್ಷಗಳಿಂದ ಇಲ್ಲಿ ಪ್ರಾರ್ಥನೆಯನ್ನು ನಿರ್ವಹಿಸುತ್ತಿದ್ದು, ಕಳೆದ ಕೆಲವು ವಾರಗಳಿಂದ ಕಿಡಿಗೇಡಿಗಳು ತಮ್ಮ ರಾಜಕೀಯದ ಲಾಭ ಗಳಿಸುವ ದುರುದ್ದೇಶದಿಂದ ಈ ರೀತಿಯ ವಿಷಯವನ್ನು ಮುಂದಿಟ್ಟುಕೊಂಡು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ತೌಫೀಕ್ ಎಂಬವರು ಆರೋಪಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ನಾಗರಿಕ ವೇದಿಕೆಯಾದ ಗುರ್ಗಾಂವ್ ನಗ್ರಿಕ್ ಏಕ್ತಾ ಮಂಚಿ (ಜಿ.ಎನ್.ಇ.ಎಂ) ಕಳೆದ ತಿಂಗಳ ಅವಧಿಯಲ್ಲಿ ಮೂರು ವಲಯಗಳಲ್ಲಿ ಪ್ರಾರ್ಥನಾ ಸ್ಥಳಗಳನ್ನು ಮುಚ್ಚಲಾಗಿದೆ ಎಂದು ಹೇಳಲಾಗುತ್ತಿವೆ.



Join Whatsapp