ರಾಜಕಾರಣಿಗಳಾಗಬೇಕಾದರೆ ಸಮಾಜದಲ್ಲಿ ನಮ್ಮನ್ನು ಒಪ್ಪಿಕೊಳ್ಳಬೇಕು: ಮಂಗಳ ಮುಖಿ ಅದಿತಿ ಶರ್ಮಾ

Prasthutha|

ಡೆಹ್ರಾಡೂನ್: ರಾಜಕಾರಣಿಗಳಾಗಬೇಕಾದರೆ ಮೊದಲನೆಯದಾಗಿ, ನಮಗೆ ಸಮಾಜದಿಂದ ಸ್ವೀಕಾರ ಬೇಕು. ಆಗ ಮಾತ್ರ ರಾಜ್ಯದಲ್ಲಿ ಯಶಸ್ವಿ ರಾಜಕಾರಣಿಯಾಗಲು ಸಾಧ್ಯ ಎಂದು  ಉತ್ತರಾಖಂಡದ ಮೊದಲ ನೋಂದಾಯಿತ ಮಂಗಳಮುಖಿ ಅದಿತಿ ಶರ್ಮ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಾಖಂಡ್ ಚುನಾವಣಾ ಆಯೋಗದಲ್ಲಿ 300 ನೋಂದಾಯಿತ ಮಂಗಳಮುಖಿಯರಿದ್ದಾರೆ. ಆದರೆ ನಮ್ಮ ಕಾಳಜಿಗಳು ಬಗೆಹರಿಯದೆ ಉಳಿದಿವೆ ಮತ್ತು ವ್ಯವಸ್ಥೆಯು ಕೇಳಿಸಿಕೊಳ್ಳುವುದಿಲ್ಲ. ನಮ್ಮ ಗುರುತು ಮತ್ತು ಸ್ವೀಕಾರಕ್ಕೆ ಸಂಬಂಧಿಸಿದ ತಳಮಟ್ಟದ ಸಮಸ್ಯೆಗಳನ್ನು ನಾವು ಮೊದಲು ಸರಿಪಡಿಸಬೇಕಾಗಿದೆ ಎಂದು ಶರ್ಮಾ ಹೇಳಿದರು.

ಉತ್ತರ ಪ್ರದೇಶದ ಮಾದರಿಯಲ್ಲಿ, ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಉತ್ತರಾಖಂಡದಲ್ಲಿ ಟ್ರಾನ್ಸ್ ಜೆಂಡರ್ ಬೋರ್ಡ್ ಅಥವಾ ಆಯೋಗವನ್ನು ನಾವು ಬಯಸುತ್ತೇವೆ. ಬಳಿಕ ಜನರು ನಮ್ಮೊಂದಿಗೆ ವಿಚಿತ್ರವಾಗಿ ವರ್ತಿಸುವುದನ್ನು ನಿಲ್ಲಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದರು.

- Advertisement -

2017 ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ, ಮಂಗಳಮುಖಿಯರ ನಾಯಕಿ ರಜನಿ ರಾವತ್ ರಾಯ್ಪುರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರು. ಆ ವರ್ಷ ಕಣದಲ್ಲಿದ್ದ ಏಕೈಕ ಮಂಗಳಮುಖಿ ಅಭ್ಯರ್ಥಿ ಅವರಾಗಿದ್ದರು. ಆದರೆ, ಈ ಬಾರಿ ಯಾವುದೇ ಸಮುದಾಯದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

ಇತ್ತೀಚೆಗಷ್ಟೇ ಬಿಜೆಪಿ ಸೇರಿದ ರಜನಿ ರಾವತ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಅದೇನೇ ಇದ್ದರೂ, ಪ್ರಮುಖ ರಾಜಕೀಯ ಪಕ್ಷಕ್ಕೆ ಅವರ ಸೇರ್ಪಡೆಯು ಉತ್ತರಾಖಂಡ ರಾಜಕೀಯದಲ್ಲಿ ಸಮುದಾಯದ ಪ್ರಾತಿನಿಧ್ಯದ ಸುತ್ತ ಚರ್ಚೆಯನ್ನು ಪ್ರಾರಂಭಿಸಿದೆ.

Join Whatsapp