ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ ಅಮಾನತು

Prasthutha|

ನವದೆಹಲಿ: ಸಂಸತ್ ನಲ್ಲಿನ ಭದ್ರತಾ ಲೋಪದ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

- Advertisement -

ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅವರನ್ನು ಅಮಾನತಿನಲ್ಲಿರಿಸಲಾಗುತ್ತದೆ. ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯಾನ್ ಅವರನ್ನು “ಅಶಿಸ್ತಿನ ನಡವಳಿಕೆಯ” ಕಾರಣ ನೀಡಿ ಅಧಿವೇಶನದ ಉಳಿದ ಭಾಗಕ್ಕೆ ರಾಜ್ಯಸಭೆಯಿಂದ ಸಭಾಪತಿ ಜಗದೀಪ್ ಧನ್ಕರ್ ಅಮಾನತುಗೊಳಿಸಿದ್ದಾರೆ.



Join Whatsapp