ಪಣಜಿ: ಟಿಎಂಸಿ ಅಂದರೆ ಡೆಂಪಲ್, ಮೋಸ್ಕ್, ಚರ್ಚ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಟಿಎಂಸಿ ಅಂದರೆ ‘ಟೆಂಪಲ್, ಮೋಸ್ಕ್, ಚರ್ಚ್’ ಎಂದರ್ಥ. ನಾವು ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇವೆ. ನಿಮಗೆಲ್ಲಾ ಗೆಲ್ಲುವ ವಿಶ್ವಾಸ ಇದೆಯಾ? ನಾವು ಬಿಜೆಪಿಗೆ ಪರ್ಯಾಯ. ನಮ್ಮೊಂದಿಗೆ ಕೈ ಜೋಡಿಸಿ. ಹೋರಾಟ ಮಾಡಿ. ಯಾವತ್ತೂ ಹಿಂಜರಿಯಬೇಡಿ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವಿನ ಉಮೇದಿನಲ್ಲಿರುವ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಗೋವಾದಲ್ಲಿ ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News