ಪ್ರತಿಪಕ್ಷಗಳ ನೀತಿ ನಿಲುವು ಸಭೆಯಿಂದ ದೂರ ಉಳಿದ ಟಿಎಂಸಿ, ಎಎಪಿ

Prasthutha|

ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷಗಳು ಯಾವ ನಿಲುವು ಹೊಂದಿ  ಆಡಳಿತ ಪಕ್ಷದ ವಿರುದ್ಧ ಹೋರಾಡಬೇಕು ಎಂಬ ಚರ್ಚೆಗೆ ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಕರೆದಿದ್ದ ಸಭೆಯಿಂದ ಟಿಎಂಸಿ- ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಎಎಪಿ- ಆಮ್ ಆದ್ಮಿ ಪಕ್ಷಗಳು ದೂರ ಉಳಿದವು.

- Advertisement -

ರಾಜ್ಯ ಸಭೆಯಿಂದ ಬೇರೆ ಬೇರೆ ಪಕ್ಷಗಳ 19 ಸಂಸದರನ್ನು ನಿನ್ನೆ ಅಮಾನತು ಮಾಡಲಾಗಿತ್ತು. ಆ ಬಗೆಗಿನ ನಿಲುವು ಏನಿರಬೇಕು ಎಂಬ ವಿಷಯದಲ್ಲಿ ಚರ್ಚಿಸಲು ಸಭೆ ಕರೆಯಲಾಗಿತ್ತು.

ಸಂಸತ್ತಿನೆದುರಿನ ಗಾಂಧೀಜಿ ಪ್ರತಿಮೆಯೆದುರು ಕಾಂಗ್ರೆಸ್ ಮತ್ತು ಕೆಲವು ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲೂ ಟಿಎಂಸಿ ಭಾಗವಹಿಸಲಿಲ್ಲ. ಟಿಎಂಸಿ ಸಂಸದರು ಪ್ರತ್ಯೇಕವಾಗಿ ಫಲಕ ಹಿಡಿದು ಘೋಷಣೆ ಕೂಗಿದರು. ಆದ್ದರಿಂದ ಪ್ರತಪಕ್ಷಗಳು ಒಂದು ಸಮಾನ ನಿಲುವಿಗೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಸ್ಪಷ್ಟ.

- Advertisement -

ಖರ್ಗೆಯವರು ಕರೆದ ಸಭೆಯಲ್ಲಿ ಡಿಎಂಕೆ, ಆರ್ ಜೆಡಿ, ಎನ್ ಸಿಪಿ, ಸಿಪಿಎಂ, ಸಿಪಿಐ, ಶಿವಸೇನೆ, ಆರ್ ಎಲ್ ಡಿ, ಎಂಡಿಎಂಕೆ, ಐಯುಎಂಎಲ್, ಆರ್ ಎಸ್ ಪಿ, ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಗಳ ಸಂಸದರು ಭಾಗವಹಿಸಿದ್ದರು. ನಾನು ಟಿಎಂಸಿ ಮತ್ತು ಎಎಪಿ ನಾಯಕರಿಗೂ ಆಮಂತ್ರಣ ನೀಡಿದ್ದೆ ಎಂದು ಖರ್ಗೆಯವರು ಮಾಧ್ಯಮದವರಲ್ಲಿ ತಿಳಿಸಿದರು.

ಎಲ್ಲರನ್ನೂ ಕರೆಯುವುದು ನಮ್ಮ ಕರ್ತವ್ಯ. ಯಾರೆಲ್ಲ ಬರುತ್ತಾರೆ, ಯಾರು ಬರುವುದಿಲ್ಲ ಎನ್ನುವುದು ಅನಂತರದ ಲೆಕ್ಕಾಚಾರ. ನನ್ನ ಗುರಿ ನಾವೆಲ್ಲ ಒಗ್ಗಟ್ಟಿನಿಂದ ಸರಕಾರದ ವಿರುದ್ಧ ಹೋರಾಡಬೇಕು ಎನ್ನುವುದಾಗಿದೆ. ಎಷ್ಟು ಜನ ಎನ್ನುವುದು ಮುಖ್ಯವಲ್ಲ. ಯಾವ ರೀತಿಯಲ್ಲಿ ಜನರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಿದರು ಮತ್ತು ಅವರೆಲ್ಲ ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸಿದರು ಎನ್ನುವುದು ಮುಖ್ಯ ಎಂದು ಖರ್ಗೆ ಹೇಳಿದರು.

“19 ಜನ ರಾಜ್ಯಸಭೆ ಸದಸ್ಯರ ಅಮಾನತು ಬಗ್ಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳವರು ವಿಷಾದ ವ್ಯಕ್ತಪಡಿಸಬೇಕು ಎಂದು ಆಳುವವರು ಬಯಸಿದ್ದಾರೆ.ಆದರೆ, ಸರಕಾರವೇ ಸಂಸತ್ತಿನಲ್ಲಿ ಜನರ ಸಮಸ್ಯೆ ಚರ್ಚೆ ನಡೆಸದ್ದಕ್ಕಾಗಿ ವಿಷಾದಿಸಬೇಕು” ಎಂದು ಟಿಎಂಸಿ ರಾಜ್ಯಸಭೆ  ಸಂಸದ  ಡೆರೆಕ್ ಓ ಬ್ರೆನ್ ಅವರು ಟ್ವೀಟ್ ಮಾಡಿದ್ದಾರೆ.

Join Whatsapp