ಮೋದಿಯನ್ನು ಸ್ವಾಗತಿಸಲು ಪಾದಚಾರಿ ಮಾರ್ಗಗಳಿಗೆ ತಿರಂಗ; ಆಕ್ರೋಶಗೊಂಡ ನೆಟ್ಟಿಗರು, ವೀಡಿಯೋ ವೈರಲ್

Prasthutha|

ಭೋಪಾಲ್: 17ನೇ ಪ್ರವಾಸಿ ಭಾರತೀಯ ದಿನದ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮಧ್ಯಪ್ರದೇಶದ ಇಂಧೋರ್ ನಗರದ ರಸ್ತೆಯ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗಕ್ಕೆ ತ್ರಿವರ್ಣ ಬಳಿಯಲಾಗಿದೆ.

- Advertisement -


ಈ ಮಧ್ಯೆ, ಹೂಡಿಕೆದಾರರು ಮತ್ತು ಎನ್ ಆರ್ ಐ ಶೃಂಗಸಭೆಯ ಪೂರ್ವಭಾವಿ ಸಿದ್ಧತೆಗಳನ್ನು ವಿವರಿಸುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಪಾದಚಾರಿ ಮಾರ್ಗಕ್ಕೆ ತ್ರಿವರ್ಣ ಬಳಿದಿರುವುದು ಆ ವಿಡಿಯೊದಲ್ಲಿ ದಾಖಲಾಗಿದ್ದು, ಇದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನ ಎಂದು ಸ್ಥಳೀಯಾಡಳಿತ ಮತ್ತು ಮಧ್ಯಪ್ರದೇಶ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನ ಎಂದು ಪಾದಚಾರಿಯೊಬ್ಬ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಅದೇ ವಿಡಿಯೊದಲ್ಲಿ ದಾಖಲಾಗಿದೆ. ಪಾದಚಾರಿ ಮಾರ್ಗಕ್ಕೆ ಬಳಿದಿರುವ ತಿರಂಗಾದಲ್ಲಿ ಅಶೋಕ ಚಕ್ರ ಇಲ್ಲದ ಕಾರಣ ಇದು ಭಾರತೀಯ ಧ್ವಜವನ್ನು ಪ್ರತಿನಿಧಿಸುವುದಿಲ್ಲ ಎಂಬ ಸಮಜಾಯಿಷಿಗಳೂ ಕೇಳಿಬರುತ್ತಿವೆ.

- Advertisement -


ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಡಾ.ಮೊಹಮ್ಮದ್ ಇರ್ಫಾನ್ ಅಲಿ, ರಿಪಬ್ಲಿಕ್ ಆಫ್ ಸುರಿನಾಮ್ ಅಧ್ಯಕ್ಷ ಚಂದ್ರಿಕಾಪರ್ಸಾದ್ ಸಂತೋಖಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Join Whatsapp