ಟಿಪ್ಪು ಸುಲ್ತಾನ್ ಖಡ್ಗ ಹರಾಜು | ₹20 ಕೋಟಿಗೆ ಮಾರಾಟವಾಗುವ ನಿರೀಕ್ಷೆ!

Prasthutha|

ಲಂಡನ್: ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರ ಚಿನ್ನದ ಹಿಡಿ ಹೊಂದಿರುವ ಖಡ್ಗವನ್ನು ಬ್ರಿಟನ್ ಸರಕಾರ ಹರಾಜು ಹಾಕಲಿದೆ. ಮೇ 23ರಂದು ನಡೆಯಲಿರುವ ಹರಾಜಿನಲ್ಲಿ ಚಿನ್ನದ ಖಡ್ಗ 15ರಿಂದ 20 ಕೋಟಿ ರೂ.ವರೆಗೆ ಮಾರಾಟವಾಗುವ ನಿರೀಕ್ಷೆಯಿದೆ.

- Advertisement -


ಖಡ್ಗದ ಮೇಲೆ ಬಹಳಷ್ಟು ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ರಾಜಸ್ಥಾನದ ಮೇವಾರ್ನ ಜನಪ್ರಿಯ ಕೋಫ್ಟಗಿರಿ ಶೈಲಿಯ ಕಲೆಯು ಈ ಖಡ್ಗದ ವಿಶೇಷತೆ.
ಸುಖೇಲ ವರ್ಗದ ಉಕ್ಕಿನಿಂದ ಕೂಡಿದ ಹರಿತವಾದ ಖಡ್ಗವು 100 ಸೆಂ.ಮೀ ಉದ್ದವಾಗಿದೆ.


ಮೈಸೂರು ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಹೈದರ್ ಅಲಿಯ ಮಗ ಟಿಪ್ಪು ಸುಲ್ತಾನ್ 1799 ರಲ್ಲಿ ಮೈಸೂರಿನ ಬಳಿಯ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಯುದ್ಧದಲ್ಲಿ ಹುತಾತ್ಮರಾಗಿದ್ದರು.
ನಂತರ ಶ್ರೀರಂಗಪಟ್ಟಣ ಅರಮನೆಯಲ್ಲಿ ದೊರೆತ ಖಡ್ಗವನ್ನು ಬ್ರಿಟಿಷ್ ಸೇನೆಯು ಮೇಜರ್ ಜನರಲ್ ಡೇವಿಡ್ ಬೇರ್ಡ್ ಅವರಿಗೆ ಉಡುಗೊರೆಯಾಗಿ ನೀಡಿತ್ತು.

- Advertisement -

2004ರಲ್ಲಿ ಟಿಪ್ಪುವಿನ ಮತ್ತೊಂದು ಖಡ್ಗವನ್ನು ಉದ್ಯಮಿ ವಿಜಯ್ ಮಲ್ಯ ಹರಾಜಿನಲ್ಲಿ 1.5 ಕೋಟಿ ರೂ.ಗೆ ಪಡೆದುಕೊಂಡಿದ್ದರು. 2014ರಲ್ಲಿ 41.2 ಗ್ರಾಂ ತೂಕದ ಟಿಪ್ಪು ಸುಲ್ತಾನ್ ಚಿನ್ನದ ಉಂಗುರ 1.42 ಕೋಟಿ ರೂ.ಗೆ ಹರಾಜಾಗಿತ್ತು.



Join Whatsapp