ಬೆಂಗಳೂರು: ಮಾಣಿಕ್ ಶಾ ಪರೇಡ್ ಮೈದಾನದ ದ್ವಾರದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಅಳಿಸಿ ಹಾಕಲಾಗದೆ. ಇದರ ವಿರುದ್ಧ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಧ್ವಜಾರೋಹಣಕ್ಕೂ ಮೊದಲು ಮಾಣಿಕ್ ಶಾ ಮೈದಾನದ ಮುಖ್ಯ ಎರಡು ದ್ವಾರಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು ಸುಲ್ತಾನ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮರ ಹೆಸರಿತ್ತು. ಆ ಬಳಿಕ ಬಣ್ಣ ಬಳಿಯುವ ವೇಳೆ ಎರಡೂ ಹೆಸರನ್ನು ಅಳಿಸಿಹಾಕಲಾಗಿದೆ. ರಾಜ್ಯದ ಮಹನೀಯರಾದ ಬೊಮ್ಮಾಯಿ ಅವರೇ, ನಿಮಗೆ ಯಾಕಿಷ್ಟು ಅಸಹನೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವನಿಗೆ ಇರುವ ಪ್ರಾಮುಖ್ಯತೆ ರಾಜ್ಯದ ಹೋರಾಟಗಾರರಿಗೆ ಯಾಕಿಲ್ಲ ಎಂದು ಕಾಂಗ್ರೆಸ್ ತಗಾದೆ ಎತ್ತಿದೆ.