ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೇ ತಪ್ಪೇನಿದೆ: ಸಚಿವ ನಾಗೇಂದ್ರ ಪ್ರಶ್ನೆ

Prasthutha|

- Advertisement -

ಬಳ್ಳಾರಿ: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಇಟ್ಟರೇ ತಪ್ಪೇನಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆಯ ಸಚಿವ ನಾಗೇಂದ್ರ ಪ್ರಶ್ನಿಸಿದ್ದಾರೆ.

ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಒಂದೊಂದು ಕಡೆ ಒಬ್ಬೊಬ್ಬ ಮಹನೀಯರ ಹೆಸರು ಇಟ್ಟಂತೆ ಇಲ್ಲಿಯೂ ಇಡಬಹುದು. ಆದರೆ ಅಂತಿಮ ನಿರ್ಣಯ ಸರ್ಕಾರಕ್ಕೆ ಬಿಟ್ಟದ್ದು. ಯಾರು ಬೇಕಾದರೂ ಅವರ ಅಭಿಪ್ರಾಯ ಮತ್ತು ಭಾವನೆ ತಿಳಿಸಬಹುದು ಎಂದರು.



Join Whatsapp