ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿರುವ ‘ಟೈಮ್ಸ್ ನೌ’ | ಸಂಪಾದಕ ಮಂಡಳಿಗೆ ಪತ್ರ ಬರೆದ ಮಾಜಿ, ಹಾಲಿ ವರದಿಗಾರರು

Prasthutha: April 25, 2021

ದೇಶದಾದ್ಯಂತ ಕೋವಿಡ್ ನಿಂದ ಜನರು ಕಂಗಾಲಾಗಿರುವ ಈ ಸಮಯದಲ್ಲಿ ಟೈಮ್ಸ್ ನೌ ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಟೈಮ್ಸ್ ನೌ ಇಂಗ್ಲಿಷ್ ಚಾನೆಲ್ ನ ಮಾಜಿ ಮತ್ತು ಹಾಲಿ ವರದಿಗಾರರು, ಉದ್ಯೋಗಿಗಳು ಸಂಪಾದಕ ಮಂಡಳಿಗೆ ಪತ್ರವೊಂದನ್ನು ಬರೆದಿದ್ದಾರೆ.

ಸಂಪಾದಕ ಮಂಡಳಿಗೆ ಕಳುಹಿಸಿದ ಪತ್ರದಲ್ಲಿ ಪತ್ರಿಕೋದ್ಯಮದ ಮೂಲ ನೀತಿ ಮತ್ತು ಮೌಲ್ಯಗಳ ಬಗ್ಗೆ ಚಾನೆಲ್‌ನ ಸಂಪಾದಕರಿಗೆ ನೆನಪಿಸಲು ಮುಕ್ತ ಪತ್ರ ಬರೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ ಎಂದು ಬರೆದಿದ್ದಾರೆ.

ನಮ್ಮ ಸುತ್ತ ಮುತ್ತ ಕಾಣುತ್ತಿರುವ ಎಲ್ಲವನ್ನೂ ನೋಡುತ್ತಾ ನಾವು ದಣಿದಿದ್ದೇವೆ, ಬೇಸರಗೊಂಡಿದ್ದೇವೆ. ಈ ದಿನಗಳಲ್ಲಿ “ಪತ್ರಿಕೋದ್ಯಮ” ದ ಹೆಸರಿನಲ್ಲಿ ಟೈಮ್ಸ್ ನೌ, ಪ್ರತಿ ಹಂತದಲ್ಲೂ ವಿಫಲವಾದ ಮತ್ತು ಈ ದೇಶದ ಜನರನ್ನು ನಿರಾಸೆಗೊಳಿಸಿದ ಸರ್ಕಾರಕ್ಕೆ ಪಿಆರ್ ಕೆಲಸ ಮಾಡುತ್ತಿದೆ ಎಂದು ‘ಟೈಮ್ಸ್ ನೌ’ ನ ರಾಹುಲ್ ಶಿವಶಂಕರ್, ನವಿಕಾ ಕುಮಾರ್, ಪದ್ಮಜಾ ಜೋಶಿ ಇವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಟೈಮ್ಸ್ ನೌ ನಂತಹ ಪ್ರತಿಷ್ಠಿತ ಚಾನೆಲ್ ನ ಪತ್ರಕರ್ತರಾಗಿ ನಾವು ಈ ದೇಶದ ಜನರಿಗೆ ಏನು ಮಾಡುತ್ತಿದ್ದೇವೆ?

ನಾವು ಪ್ರತಿಪಕ್ಷಗಳನ್ನು ದೂಷಿಸುತ್ತಾ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದೇವೆ. ಹಿಂದೂ-ಮುಸ್ಲಿಂ ಕೋಮು ಕಥೆಗಳನ್ನು ಪ್ರಸಾರ ಮಾಡುವ ನಾವು ಸರ್ಕಾರದ ವಿರುದ್ಧವಾದ ಸುದ್ದಿಗಳನ್ನು ಪ್ರಸಾರ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!