ಬೆಂಗಳೂರು: ನಟಿ ಅಮೂಲ್ಯ ಅವರ ಇಬ್ಬರು ಮಕ್ಕಳ ಕೊರಳಲ್ಲೂ ಹುಲಿ ಉಗುರಿನ ಪೆಂಡೆಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ಅಮೂಲ್ಯ ಸ್ಪಷ್ಟನೆ ನೀಡಿದ್ದಾರೆ. ಅವುಗಳು ಅಸಲಿ ಉಗುರುಗಳೇ ಅಲ್ಲ ಎಂದು ಹೇಳಿದ್ದಾರೆ.
ಮಕ್ಕಳ ನಾಮಕರಣದ ವೇಳೆ ಧರಿಸಿದ್ದ ಪೆಂಡೆಂಟ್ ನಲ್ಲಿಯ ಹುಲಿ ಉಗುರು ಅಸಲಿ ಅಲ್ಲ. ಸಿಂಥೆಟಿಕ್ ಹುಲಿ ಉಗುರು ಅವು. ಅಂತಹ ನಕಲಿ ಉಗುರುಗಳು 500-600ಗೆ ಸಿಗುತ್ತವೆ. ಅರಣ್ಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಖಂಡಿತಾ ಅವುಗಳನ್ನು ನೀಡುತ್ತೇನೆ ಎಂದಿದ್ದಾರೆ ನಟಿ ಅಮೂಲ್ಯ. ಉಗುರುಗಳು ಅಸಲಿಯಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.