ಲಕ್ಷ್ಮಣ ಸವದಿ ಪುತ್ರನಲ್ಲಿಯೂ ಹುಲಿ ಉಗುರು: ಅರಣ್ಯಾಧಿಕಾರಿಗಳಿಂದ ನಿವಾಸಕ್ಕೆ ಭೇಟಿ, ಪರಿಶೀಲನೆ

Prasthutha|

ಅದೇ ರಾಗ ಅದೇ ಹಾಡು!

- Advertisement -

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಸ್ಪರ್ಧಾ ವೇದಿಕೆಯಿಂದಲೇ ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಈ ಬಳಿಕ ಸೆಲೆಬ್ರೆಟಿಗಳು, ರಾಜಕಾರಣಿಗಳು. ಧಾರ್ಮಿಕ ವ್ಯಕ್ತಿಗಳ ಹುಲಿ ಉಗುರು ಲಾಕೆಟ್, ಹುಲಿ ಚರ್ಮ ಧರಿಸಿದ ಪ್ರಕರಣಗಳು ಒಂದೊಂದೇ ಬಯಲಾಗುತ್ತಿದೆ. ಈಗ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಸುಮಿತ್ ಮದುವೆ ವೇಳೆಯಲ್ಲಿ ಹುಲಿ ಉಗುರು ಪೆಂಡೆಂಟ್ ಧರಿಸಿರೋ ಪೋಟೋ ವೈರಲ್ ಆಗಿದ್ದು ಅರಣ್ಯಾಧಿಕಾರಿಗಳಿಗೆ ಕೆಲಸ ತಂದುಕೊಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸವದಿ ಪುತ್ರ ಸುಮಿತ್ ಪೋಟೋ ವೈರಲ್ ಆದ ಬಳಿಕ ಅವರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ, ಲಕ್ಷ್ಮಿ ಹೆಬ್ಬಾಳ್ಕರ್ ರಂತೆ , ಲಕ್ಷ್ಮಣ ಸವದಿ ಇನ್ಗನೋರ್ವ ಮಗ ” ನನ್ನ ಸಹೋದರ ಧರಿಸಿರೋ ಪೆಂಡೆಂಟ್ ಪ್ಲಾಸ್ಟಿಕ್ ಹುಲಿ ಉಗುರು ಆಗಿದೆ. ಅದು ನೈಜವಾದದ್ದು ಅಲ್ಲ. ಅದನ್ನ ಮದುವೆ ಸಂದರ್ಭದಲ್ಲಿ ಗೆಳೆಯರು ಗಿಫ್ಟ್ ಆಗಿ ನೀಡಿದ್ದರು ಎಂದು ಸ್ಪಷ್ಟ ಪಡಿಸಿದ್ದು, ಅದನ್ನು ಅರಣ್ಯಾಧಿಕಾರಿಗಳಿಗೆ ನೀಡುವುದಾಗಿ ಹೇಳಿದ್ದಾರೆ.

- Advertisement -

ಲಕ್ಷ್ಮಿ ಹೆಬ್ಬಾಳ್ಕರ್, ಕುಮಾರಸ್ವಾಮಿ, ಇದೀಗ ಲಕ್ಷಂಣ ಸವದಿ ಪುತ್ರ ಮೂವರೂ ಒಂದೇ ರಾಗ ಹಾಡಿದ್ದು, ಮದುವೆಯಲ್ಲಿ ಸ್ನೇಹಿತರು ಕೊಟ್ಟಿದ್ದೆಂದು ಹೇಳಿದ್ದಾರೆ. ಇಷ್ಟು ಅತಿರಥ ಮಹಾರಥರ ಮಕ್ಕಳಿಗೆ ನಕಲಿ ಹುಲಿಉಗುರು ಕೊಡುವ ಧೈರ್ಯ ಮಾಡಿದ್ದವರಾದರೂ ಯಾರಾಗಿರಬಹುದು ಅಲ್ವಾ?

Join Whatsapp