ಬೆಂಗಳೂರು: ಕಟ್ಟಡ ನಿರ್ಮಾಣದ ವೇಳೆ ಜೆಸಿಬಿ ಹರಿದು ಮೂರು ವರ್ಷದ ಮಗು ಬಲಿಯಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧನ್ವಂತರಿ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಕಾಮಗಾರಿ ವೇಳೆ ತಂದೆ ಡೇವಿಡ್ ಜೊತೆ ಸ್ಥಳಕ್ಕೆ ಬಂದಿದ್ದ ಸಿಮಿಯಾನ್ ಎಂಬ ಪುಟ್ಟ ಬಾಲಕಿ ಜೆಸಿಬಿಯಡಿಗೆ ಬಿದ್ದು ಮೃತಪಟ್ಟಿದೆ.
ಜೆಸಿಬಿ ಹಿಂದಕ್ಕೆ ಚಲಿಸುವಾಗ ಮಗುವಿನ ಮೇಲೆ ಹರಿದಿದೆ. ಘಟನೆಗೆ ಸಂಬಂಧಿಸಿ ಚಾಲಕ ಶಂಕರ್ ನಾಯಕ್ ನನ್ನು ಪೊಲೀಸರು ಬಂಧಿಸಿದ್ದಾರೆ.