ಸ್ಪೋಟದಿಂದ ಧರೆಗುರುಳಿದ ಮೂರು ಮಹಡಿ ಕಟ್ಟಡ; ಏಳು ಮಂದಿ ಸಾವು, ಹಲವರಿಗೆ ಗಾಯ

Prasthutha|

ಪಾಟ್ನಾ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡ ಧರಾಶಾಹಿಯಾದ ಘಟನೆ ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಏಳು ಮಂದಿ  ಸಾವನ್ನಪ್ಪಿದ್ದು, ಹಲವು  ಮಂದಿ ಗಾಯಗೊಂಡಿದ್ದಾರೆ.

- Advertisement -

ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ತುರ್ತು ಸೇವೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಕುಸಿದ ಕಟ್ಟಡದ ಅವಶೇಷಗಳ ಅಡಿಯಿಂದ ಹತ್ತರಿಂದ 15 ಮಂದಿ ಸಿಲುಕಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಮಾಯಾಗಂಜ್‌ನ ಜೆಎಲ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಭಾಗಲ್ಪುರ ರೇಂಜ್ ಡಿಐಜಿ ಸುಜಿತ್ ಕುಮಾರ್ ‘ನಾಶವಾದ ಕಟ್ಟಡದಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದರು ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಗನ್‌ಪೌಡರ್, ಅಕ್ರಮ ಪಟಾಕಿಗಳು ಮತ್ತು ಕಟ್ಟಡದಲ್ಲಿ ಸಂಗ್ರಹಿಸಲಾದ ದೇಶಿ ನಿರ್ಮಿತ ಬಾಂಬ್‌ ಗಳು ಸ್ಫೋಟಕ್ಕೆ ಪ್ರಾಥಮಿಕ ಕಾರಣವಾಗಿದೆ. ತನಿಖೆಯನ್ನು ಪ್ರಾರಂಭಿಸಲಾಗಿದೆ. ಫೋರೆನ್ಸಿಕ್ಸ್ ತಂಡವು ಘಟನಾ ಸ್ಥಳವನ್ನು ಪರೀಕ್ಷಿಸಿದ ನಂತರ ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

ಸ್ಥಳೀಯ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿರುವ ಜಿಲ್ಲೆಯ ಕಜ್ವಾಲಿಚಕ್ ಪ್ರದೇಶದ ಅನಾಥಾಶ್ರಮದ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಪ್ರಬಲ ಸ್ಫೋಟದಿಂದಾಗಿ  ಅಕ್ಕಪಕ್ಕದ ಹಲವು ಮನೆಗಳಿಗೂ ಹಾನಿಯುಂಟಾಗಿದೆ.

Join Whatsapp