ಆಡಳಿತ ಸೇವಾ ಪರೀಕ್ಷೆಯನ್ನು ಒಟ್ಟಾಗಿ ಪಾಸಾಗಿ ಇತಿಹಾಸ ನಿರ್ಮಿಸಿದ ಮೂವರು ಸಹೋದರಿಯರು !

Prasthutha|

ನವದೆಹಲಿ : ರಾಜಸ್ಥಾನದ ಹನುಮಾನ್ ಘರ್ ಎಂಬಲ್ಲಿನ ಒಂದೇ ಕುಟುಂಬದ ಮೂವರು ಸಹೋದರಿಯರು ಒಟ್ಟಾಗಿ ರಾಜ್ಯದ ಆಡಳಿತಾತ್ಮಕ ಸಂಬಂಧಿಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈ ಮೂವರು ಸಹೋದರಿಯರಿಗೆ ಈಗಾಗಲೇ ಅಧಿಕಾರಿಗಳಾಗಿದ್ದ ಅದೇ ಕುಟುಂಬದ ಇನ್ನಿಬ್ಬರು ಸಹೋದರಿಯರು ಬೆಂಬಲಿಸಿದ್ದರು. ಇದರೊಂದಿಗೆ ಆ ಕುಟುಂಬದ ಐವರು ಸದಸ್ಯರು ಸರ್ಕಾರಿ ಹುದ್ದೆಗೇರಿದಂತಾಗಿದೆ.

- Advertisement -

ಭಾರತೀಯ ಅರಣ್ಯ ಸೇವಾ -ಐಎಫ್ಎಸ್ ವಿಭಾಗದ ಅಧಿಕಾರಿ ಪರ್ವೀನ್ ಕಸ್ವಾನ್ ಈ ಸುದ್ದಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಒಡಹುಟ್ಟಿದವರನ್ನು ಅಭಿನಂದಿಸಿದ್ದಾರೆ. ಮಾತ್ರವಲ್ಲದೆ ಅವರು ಈ 3 ಸಹೋದರಿಯರ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ರಾಜಸ್ಥಾನದ ಹನುಮಾನ್ ಘರ್ ಎಂಬಲ್ಲಿನ ಸಹೋದರಿಯರಾದದ ಅನ್ಶು, ರೀತು ಮತ್ತು ಸುಮನ್ ಎಂಬವರು ಒಟ್ಟಾಗಿ ರಾಜಸ್ಥಾನ್ ಅಡ್ಮಿನಿಷ್ಟ್ರೇಶನ್ ಸರ್ವಿಸ್ ( ಆರ್.ಎ.ಎಸ್) ಆಯ್ಕೆಯಾಗಿರುವುದು ಕುಟುಂಬಕ್ಕೆ ಮತ್ತು ಇಡೀ ರಾಜಸ್ಥಾನಕ್ಕೆ ಹೆಮ್ಮೆಯಾಗಿದೆಯೆಂದು ಪರ್ವೀನ್ ಕಸ್ವಾನ್ ತಿಳಿಸಿದ್ದಾರೆ. ರೋಮಾ ಮತ್ತು ಮಂಜು ಆರ್.ಎ.ಎಸ್. ನಲ್ಲಿ ಸೇವೆ ಸಲ್ಲಿಸಿರುತ್ತಿರುವ ಇತರ ಇಬ್ಬರು ಸಹೋದರಿಯರು. ಇದರೊಂದಿಗೆ ರೈತರಾದ ಸಹದೇವ್ ಅವರ ಐವರು ಮಕ್ಕಳು ಆರ್.ಎ.ಎಸ್ ಸ್ಥಾನ ಪಡೆದಿರುವುದು ಶುಭ ಸುದ್ದಿಯೆಂದು ಪರ್ವೀನ್ ಕಸ್ವಾನ್ ರವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಟ್ವೀಟ್ ಗೆ ಭಾರೀ ಪ್ರಮಾಣದ ಪ್ರಶಂಸೆ ವ್ಯಕ್ತವಾಗಿದೆ.

- Advertisement -

ರಾಜಸ್ಥಾನ ಪಬ್ಲಿಕ್ ಸೇವಾ ಕಮಿಷನ್ (ಆರ್.ಪಿ.ಎಸ್.ಸಿ) ಮಂಗಳವಾರ ರಾಜಸ್ಥಾನ ಅಡ್ಮಿನಿಷ್ಟ್ರೇಶನ್ ಸರ್ವಿಸ್ (ಆರ್.ಎ.ಎಸ್) ಅಂತಿಮ ಪಲಿತಾಂಶವನ್ನು ಬಿಡುಗಡೆಗೊಳಿಸಿದ್ದು, ಜುನ್ಜುನು ಎಂಬಲ್ಲಿನ ಮುಕ್ತಾ ರಾವ್ ಪ್ರಥಮ ಸ್ಥಾನ ಪಡೆದರೆ, ಟೋಂಕ್ ನ ಮನಮೋಹನ್ ಶರ್ಮಾ ಮತ್ತು ಜೈಪುರದ ಶಿವಕ್ಷಿ ಖಂಡಲ್ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮೂಲಕ ಅಗ್ರಸ್ಥಾನವನ್ನು ಅಭಿನಂದಿಸಿದ್ದಾರೆ.

Join Whatsapp