ಪಾಲಕ್ಕಾಡ್: ಕಳೆದ ತಿಂಗಳು PFI ಮುಖಂಡ ಝುಬೈದ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PFI ಮುಖಂಡ ಝುಬೈರ್ ಎಂಬವರನ್ನು ಎಪ್ರಿಲ್ 15 ರಂದು ಕಡಿದು ಭೀಕರವಾಗಿ ಕೊಲೆ ನಡೆಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸುಚಿತ್ರನ್, ಗಿರೀಶ್ ಮತ್ತು ಜಿನೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ನವೆಂಬರ್ ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಎಸ್. ಸಂಜಿತ್ ಎಂಬಾತನನ್ನು ಎಸ್.ಡಿ.ಪಿ.ಐ ಕಾರ್ಯಕರ್ತರು ಹತ್ಯೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಕೊಲೆಗೆ ಪ್ರತಿಕಾರವಾಗಿ PFI ಮುಖಂಡ ಝುಬೈರ್ ಎಂಬಾತನನ್ನು ಹತ್ಯೆ ನಡೆಸಲಾಗಿದೆ ಎಂಬ ಸಂಶಯವನ್ನು ಪೊಲೀಸರು ವಕ್ತಪಡಿಸಿದ್ದರು.