ಅರುಣಾಚಲ ಪ್ರದೇಶ: ಕೇರಳದ ದಂಪತಿ, ಮಹಿಳೆ ಸೇರಿ ಮೂವರ ನಿಗೂಢ ಸಾವು

Prasthutha|

ಅರುಣಾಚಲ ಪ್ರದೇಶದ ಹೋಟೆಲ್ ವೊಂದರಲ್ಲಿ ಕೇರಳದ ದಂಪತಿ ಮತ್ತವರ ಸ್ನೇಹಿತೆ ಸೇರಿ ಮೂವರ ಶವ ಪತ್ತೆಯಾಗಿದೆ. ಮೂವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಈಶಾನ್ಯ ರಾಜ್ಯಕ್ಕೆ ತಂಡವನ್ನು ಕಳುಹಿಸಲಿದ್ದಾರೆ.

- Advertisement -


ದಂಪತಿಯನ್ನು ಕೊಟ್ಟಾಯಂ ನಿವಾಸಿಗಳಾದ ನವೀನ್ ಮತ್ತು ಅವರ ಪತ್ನಿ ದೇವಿ ಮತ್ತು ತಿರುವನಂತಪುರಂ ನಿವಾಸಿ ಆರ್ಯ ಎಂದು ಗುರುತಿಸಲಾಗಿದೆ. ಸ್ನೇಹಿತೆಯನ್ನು ಆರ್ಯ ಬಿ ನಾಯರ್ ಎಂದು ಗುರುತಿಸಲಾಗಿದೆ.

ಮೂವರ ವರ್ತನೆಯನ್ನು ಏನೋ ಅಸಹಜ ವರ್ತನೆ ಇತ್ತು ಎಂದು ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಸಿ ನಾಗರಾಜು ಹೇಳಿದ್ದಾರೆ. ಇಂದು ರಾತ್ರಿಯೇ ನಮ್ಮ ತಂಡ ಅಲ್ಲಿಗೆ ಹೋಗಲಿದೆ. ತನಿಖೆ ಮುಗಿದ ಬಳಿಕ ಅಲ್ಲಿಂದ ಸಾಕ್ಷ್ಯ ತರುತ್ತೇವೆ,. ಮೂವರು ಅಲ್ಲಿಗೆ ಏಕೆ ಹೋದರು ಮತ್ತು ಅವರು ಹೇಗೆ ಸತ್ತರು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.



Join Whatsapp