ಜಾರ್ಖಂಡ್ ಜು, 29: ಭತ್ತ ನಾಟಿ ಮಾಡಲು ತೆರಳಿದ್ದ ಒಂದೇ ಕುಟುಂಬದ ಮೂವರು ವಿದ್ಯುತ್ ಶಾಖ್ ನಿಂದ ಮೃತಪಟ್ಟಿರುವ ದುರಂತ ಘಟನೆಯೊಂದು ಜಾರ್ಖಂಡ್ ಜಿಲ್ಲೆಯ ಮಾನಿಕಾ ಪೊಲೀಸ್ ಠಾಣೆ ಪ್ರದೇಶದ ನಿವೇದ್ ಗ್ರಾಮದಲ್ಲಿ ಸಂಭವಿಸಿದೆ.
ಮೃತರು ಗಂಗೇಶ್ವರ ಸಿಂಗ್, ಧನೋರಾ ದೇವಿ ಮತ್ತು ಬಬ್ಲು ಸಿಂಗ್ ಎಂದು ಗುರುತಿಸಲಾಗಿದೆ. ಮೂವರೂ ಭತ್ತ ನಾಟಿ ಮಾಡಲು ತಮ್ಮ ಹೊಲಗಳಿಗೆ ನೀರು ಹರಿಸಲು ತೆರಳಿದ್ದರು. ಈ ಸಮಯದಲ್ಲಿ ವಿದ್ಯುತ್ ತಂತಿ ತುಳಿದಿದ್ದಾರೆ. ಇದರಿಂದಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರೆ. ಈ ಘಟನೆ ಕುರಿತು ಮಾನಿಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.