ಸರೋವರದಲ್ಲಿ ಮುಳುಗಿ ಭಾರತ ಮೂಲದ ಮೂವರು ಮೃತ್ಯು

Prasthutha|

ವಾಷಿಂಗ್ಟನ್: ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುತ್ತಿದ್ದಾಗ ಮಂಜುಗಡ್ಡೆ ಕುಸಿದು, ಒಬ್ಬ ಮಹಿಳೆ ಸೇರಿ ಭಾರತ ಮೂಲದ ಮೂವರು ಮೃತಪಟ್ಟಿರುವ ಘಟನೆ ಅಮೆರಿಕದ ಅರಿಜೋನಾ ರಾಜ್ಯದ ಕೊಕೊನಿನೊ ಕೌಂಟಿಯ ವುಡ್ಸ್ ಕ್ಯಾನಿಯನ್ ಸರೋವರದಲ್ಲಿ ನಡೆದಿದೆ.

- Advertisement -

ಮೃತರನ್ನು ಭಾರತ ಮೂಲದ ನಾರಾಯಣ ಮುದ್ದಣ(49), ಗೋಕುಲ್ ಮೆಡಿಸೆಟಿ(47) ಮತ್ತು ಹರಿತಾ ಮುದ್ದಣ ಎಂದು ಗುರುತಿಸಲಾಗಿದ್ದು, ಅರಿಜೋನಾದ ಚಾಂಡ್ಲರ್ ನಿವಾಸಿಗಳಾಗಿದ್ದಾರೆ ಎಂದು ಕೊಕಿನಿನೊ ಕೌಂಟಿ ಪೊಲೀಸ್ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸರೋವರಕ್ಕೆ ಬಿದ್ದ ಹರಿತಾ ಮುದ್ದಣ ಅವರನ್ನು ಮೇಲೆತ್ತುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದು, ಆದರೆ, ಜೀವ ಉಳಿಸುವ ತಕ್ಷಣದ ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

- Advertisement -

ಅಮೆರಿಕ ಮತ್ತು ಕೆನಡಾದ ಹಲವೆಡೆ ಶೀತ ಮಾರುತ ಹೆಚ್ಚಾಗಿದ್ದು, ಅತ್ಯಧಿಕ ಜನರು ಇದರಿಂದ ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp