ಇಸ್ರೇಲ್ ಮತ್ತು ಹಮಾಸ್ ಯುದ್ಧ ವಿರಾಮ ಒಪ್ಪಂದ ಫಲಪ್ರದವಾಗಿದ್ದು, 90 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಅವರನ್ನು ಹಮಾಸ್ ಬಾವುಟದೊಂದಿಗೆ ಜನ ಸ್ವಾಗತಿಸಿದ್ದಾರೆ.
ಬಸ್ ನಲ್ಲಿ ಕೈದಿಗಳನ್ನು ಹಸ್ತಾಂತರಿಸಲಾಗಿದೆ. ಪ್ರತಿಯಾಗಿ ಹಮಾಸ್ ಮೂವರನ್ನು ಬಿಡುಗಡೆಗೊಳಿಸಿದೆ.
ಇದರೊಂದಿಗೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಅನುಷ್ಠಾನದಲ್ಲಿ 630 ಕ್ಕೂ ಹೆಚ್ಚು ಮಾನವೀಯ ನೆರವು ಟ್ರಕ್ ಗಳು ಗಾಜಾ ಪಟ್ಟಿಯನ್ನು ಪ್ರವೇಶಿಸಿವೆ ಎಂದು ವಿಶ್ವಸಂಸ್ಥೆಯ ಮಾನವೀಯ ಅಧಿಕಾರಿಗಳು ಹೇಳಿದ್ದಾರೆ.