ಪಿಎಫ್‌ಐ, ಎಸ್‌ಡಿಪಿಐ ನಾಯಕರಿದ್ದ ವಾಟ್ಸಾಪ್ ಗ್ರೂಪ್‌ನಲ್ಲಿ ಸದಸ್ಯರಾಗಿದ್ದಕ್ಕೆ ಮೂವರು ಪೊಲೀಸರ ವರ್ಗಾವಣೆ

Prasthutha|

ಇಡುಕ್ಕಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್‌ಡಿಪಿಐ ನಾಯಕರಿರುವ ವಾಟ್ಸಾಪ್ ಗ್ರೂಪ್‌ನ ಸದಸ್ಯರಾಗಿದ್ದರು ಎಂಬ ಕಾರಣಕ್ಕೆ ಮೂವರು ಪೊಲೀಸರನ್ನು ವರ್ಗಾವಣೆ ಮಾಡಿರುವ ಘಟನೆ ಕೇರಳದ ಮುನ್ನಾರ್‌ನಲ್ಲಿ ನಡೆದಿದೆ.

- Advertisement -

ಪಿಎಫ್‌ಐ ಎಸ್‌ಡಿಪಿಐ ನಾಯಕರಿರುವ ಕ್ರಿಯೇಟಿವ್ ಸ್ಪೇಸ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಸದಸ್ಯರಾಗಿದ್ದೇ ಈ ಮೂವರು ಪೊಲೀಸರ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣ.

ಈ ಮೂವರು ಪೊಲೀಸರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಪಿಎನ್ ಅಪ್ಲಿಕೇಶನ್‌ಗಳನ್ನು ಬಳಸಿರುವುದು ಸಹ ಕಂಡುಬಂದಿದೆ. 

- Advertisement -

ನಾವು ಇದ್ದ ಗ್ರೂಪ್ ಕೇವಲ ಎಸ್‌ಡಿಪಿಐ, ಪಿಎಫ್‌ಐ ನಾಯಕರಿರುವ ವಾಟ್ಸಾಪ್ ಗ್ರೂಪ್ ಅಲ್ಲ. ಅದು ಮಹಲ್ಲ್ (ಮಸೀದಿ ಜಮಾಅತ್ ವ್ಯಾಪ್ತಿ) ಸಮಿತಿಯ ಗ್ರೂಪ್ ಆಗಿತ್ತು ಎಂದು ವರ್ಗಾವಣೆಗೊಂಡ ಪೊಲೀಸರು ಹೇಳಿದ್ದು, ಈ ಗ್ರೂಪ್‌ನಲ್ಲಿ ಅವರನ್ನು ಹೊರತುಪಡಿಸಿ ಇತರ 9 ಪೊಲೀಸರು, 15 ಸರಕಾರಿ ನೌಕರರು ವಿವಿಧ ರಾಜಕೀಯ ಪಕ್ಷದ ನಾಯಕರೂ ಸದಸ್ಯರಾಗಿದ್ದರು ಎಂದು ಪೊಲೀಸ್ ಆಂತರಿಕ ತನಿಖೆ ವೇಳೆ ಮಾಹಿತಿ ನೀಡಿದ್ದಾರೆ.

Join Whatsapp