ಅಂಗನವಾಡಿ ಮೇಲ್ಛಾವಣಿ ಕುಸಿದು ಮೂವರು ಮಕ್ಕಳಿಗೆ ಗಾಯ

Prasthutha|

ಯಾದಗಿರಿ: ಅಂಗನವಾಡಿ ಮೇಲ್ಛಾವಣಿ ಪ್ಲಾಸ್ಟರ್​ ಕುಸಿತವಾಗಿ ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಶಹಾಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಮರಕಲ್ ಗ್ರಾಮದಲ್ಲಿ ನಡೆದಿದೆ.

- Advertisement -

10 ತಿಂಗಳ ಮಗು ಕೀರ್ತಿ ಸೇರಿದಂತೆ ಮೂವರು ಮಕ್ಕಳಿಗೆ ಗಾಯವಾಗಿದೆ. ಗಾಯಾಳು ಕೀರ್ತಿಗೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕುತ್ತಿರುವಾಗಲೇ ಕುಸಿದ ಮೇಲ್ಛಾವಣಿಯ ಪ್ಲಾಸ್ಟರ್ 10 ತಿಂಗಳ ಮಗು ಕೀರ್ತಿ ಸೇರಿ ಮೂವರ ತಲೆ ಮೇಲೆ ಬಿದ್ದಿದೆ. ಇನ್ನು ಅಲ್ಲಿಯೇ ಇದ್ದ ಇತರ ಆರು ಮಕ್ಕಳು ಹಾಗೂ ಪೋಷಕರು ಪಾರಾಗಿದ್ದಾರೆ.

Join Whatsapp