ನಕ್ಸಲರಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪೂರೈಸುತ್ತಿದ್ದ CRPF ಕಾನ್ಸ್ ಸ್ಟೆಬಲ್ ಸೇರಿ ಮೂವರ ಬಂಧನ !

Prasthutha|

ಜಾರ್ಖಂಡ್: ನಕ್ಸಲರಿಗೆ  ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಇನ್ನಿತರ ನೆರವು ಒದಗಿಸುತ್ತಿದ್ದ  ಮೂವರನ್ನು ಜಾರ್ಖಂಡ್ ನ ಭಯೋತ್ಪಾದಕ ವಿರೋಧಿ ದಳ ಬಂಧಿಸಿದೆ.

- Advertisement -

ಬಂಧಿತರು ಬಿಹಾರ ಮೂಲದವರಾಗಿದ್ದು, ಅವಿನಾಶ್ ಕುಮಾರ್ (29) ಕಳೆದ ಪಂಕಜ್ ಸಿಂಗ್ (48) ಮತ್ತು ರಿಶಿ ಕುಮಾರ್ (49) ಎಂದು ಗುರುತಿಸಲಾಗಿದೆ.

ಬಂಧಿತ ಮೂವರಲ್ಲಿ ಒಬ್ಬ  ಸಿಆರ್ ಪಿಎಫ್ ಕಾನ್ ಸ್ಟೆಬಲ್ ಆಗಿದ್ದು, ಇವರು  2017 ರಿಂದಲೂ ಪುಲ್ವಾಮಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಇವರು ಸಿಪಿಐ (ಎಂ) -(ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಗೆ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

- Advertisement -

ಅಷ್ಟೇ ಅಲ್ಲ ಇನ್ನಿತರ ಕೆಲವು ಕ್ರಿಮಿನಲ್ ಕೇಸ್ ಗಳಲ್ಲೂ ಭಾಗಿಯಾಗಿ ಎನ್ನಲಾಗಿದೆ. ಈ ಮೂವರೂ ಸೇರಿಕೊಂಡು ಈಗಾಗಲೇ ಎಕೆ 47 ಮತ್ತು ಐಎನ್ ಎಸ್ ಎಎಸ್ ರೈಫಲ್ಸ್ ಗಳನ್ನು ಭಾರಿ ಪ್ರಮಾಣದಲ್ಲಿ ಮಾವೋವಾದಿಗಳಿಗೆ ಪೂರೈಕೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Join Whatsapp